Select Your Language

Notifications

webdunia
webdunia
webdunia
webdunia

ಬಿಜೆಪಿಯ ಮಹಿಳಾ ಕಾರ್ಯಕರ್ತೆಯಿಂದ ಲೈಂಗಿಕ ಕಿರುಕುಳದ ಆರೋಪ; ಹುದ್ದೆಗೆ ರಾಜೀನಾಮೆ ನೀಡಿದ ಬಿಜೆಪಿಯ ಹಿರಿಯ ಮುಖಂಡ

ಬಿಜೆಪಿಯ ಮಹಿಳಾ ಕಾರ್ಯಕರ್ತೆಯಿಂದ ಲೈಂಗಿಕ ಕಿರುಕುಳದ ಆರೋಪ; ಹುದ್ದೆಗೆ ರಾಜೀನಾಮೆ ನೀಡಿದ ಬಿಜೆಪಿಯ ಹಿರಿಯ ಮುಖಂಡ
ಉತ್ತರಾಖಂಡ , ಮಂಗಳವಾರ, 13 ನವೆಂಬರ್ 2018 (06:49 IST)
ಉತ್ತರಾಖಂಡ : ಬಿಜೆಪಿಯ ಹಿರಿಯ ಮುಖಂಡರೊಬ್ಬರ ಮೇಲೆ ಬಿಜೆಪಿಯ ಮಹಿಳಾ ಕಾರ್ಯಕರ್ತೆವೊಬ್ಬಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ.


ಉತ್ತರಾಖಂಡ್​ನ ಬಿಜೆಪಿ ಹಿರಿಯ ಮುಖಂಡ ಸಂಜಯ್​ ಕುಮಾರ್ ಕಳೆದ ಕೆಲ ತಿಂಗಳ ಹಿಂದೆ ಪಕ್ಷದ ಸಮಾರಂಭವೊಂದರಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ​​ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ನವೆಂಬರ್​ 10ರಂದು ರಾತ್ರಿ ಬಿಜೆಪಿಯ ಮಹಿಳಾ ಕಾರ್ಯಕರ್ತೆವೊಬ್ಬಳು ಇಮೇಲ್ ಮೂಲಕ ದೂರು ನೀಡಿದ್ದಾಳೆ ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಇನ್ನು ಬಿಜೆಪಿ ಹಿರಿಯ ಮುಖಂಡ ಸಂಜಯ್​ ಕುಮಾರ್ ತಮ್ಮ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬಳಸಿ ಯುವತಿಗೆ ವಂಚನೆ