Publish Date: Mon, 12 Nov 2018 (15:29 IST)
Updated Date: Mon, 12 Nov 2018 (15:31 IST)
ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶ ಹಿನ್ನಲೆಯಲ್ಲಿ ಗುಲ್ಬರ್ಗ ಪ್ರವಾಸದಲ್ಲಿದ್ದ ಸಚಿವ ಸದಾನಂದಗೌಡ ಪ್ರವಾಸ ಮೊಟಕುಗೊಳಿಸಿ ಹೈದಾರಾಬಾದ್ ಮುಖಾಂತರ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸದಾನಂದಗೌಡ, ಕಿರಿಯ ವಯಸ್ಸಿನಲ್ಲೇ ಅನಂತಕುಮಾರ್ ರ ಸಾವು ಅತ್ಯಂತ ನೋವನ್ನು ಉಂಟು ಮಾಡಿದೆ. ಅವರ ರಾಜಕೀಯ ಅನುಭವ, ಅವರ ಸಮಾಜ ಸೇವೆ ಅಪಾರವಾದದ್ದು, ಅವರ ಸಾವು ಪಕ್ಷ ಸೇರಿದಂತೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಎತ್ತರದ ಮಟ್ಟಕ್ಕೆ ಬರಬೇಕಾದರೆ ಅವರು ಸರ್ವಸ್ವವನ್ನೂ ಧಾರೆ ಎರೆದವರು. ಕೇಂದ್ರದಲ್ಲಿ ಕರ್ನಾಟಕದ ಬಗ್ಗೆಯೂ ವಿಚಾರಗಳನ್ನು ಪ್ರಸ್ತಾಪಿಸಿ, ಮುಟ್ಟಿಸಿ ಅಭಿವೃದ್ಧಿಗೆ ಕೈ ಜೋಡಿಸಿದ್ದರು. ನನಗೆ ಒಳ್ಳೆಯ ಸ್ನೇಹಿತನಾಗಿ ಸಲಹೆ ಸೂಚನಗಳನ್ನ ನೀಡುತ್ತಿದ್ದರು. ಅವರ ವಿಚಾರಗಳು ನಡೆದಂತೆ ರೀತಿ ನನಗೆ ಸಾಕಷ್ಟು ಶಕ್ತಿ ಕೊಟ್ಟಿತ್ತಿ ಎಂದು ಸದಾನಂದಗೌಡ ಸ್ಮರಿಸಿ, ಸಂತಾಪ ವ್ಯಕ್ತಪಡಿಸಿದ್ದಾರೆ.