Publish Date: Mon, 12 Nov 2018 (15:25 IST)
Updated Date: Mon, 12 Nov 2018 (15:27 IST)
ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕೇಂದ್ರ ಸಚಿವ ಅನಂತಕುಮಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಎರಡು ಕಣ್ಣುಗಳಿದ್ದಂತೆ. ಈಗ ಬಿಜೆಪಿ ಬೆಳೆಸಿದ ಒಂದು ಕಣ್ಣು ಕಳೆದುಕೊಂಡಿದ್ದು ದೊಡ್ಡ ಆಘಾತವಾಗಿದೆ ಎಂದು ಮಾಜಿ ಸಚಿವ ಕಂಬನಿ ಮಿಡಿದಿದ್ದಾರೆ.
ಯಾದಗಿರಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ರಾಜುಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ರಾಜುಗೌಡ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ ಅವರ ಅಗಲಿಕೆಯು ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಅನಂತಕುಮಾರ ಅವರು ಅವರು ಒಳ್ಳೆ ನೇತಾರರು.
ಕರ್ನಾಟಕ ಅಭಿವೃದ್ಧಿಯ ಒಳ್ಳೆಯ ಕನಸುಗಾರರಾಗಿ ಅಭಿವೃದ್ಧಿ ಮಾಡಿದ್ದಾರೆ. ಯುವಕರಿಗೆ ಸದಾ ಪ್ರೋತ್ಸಾಹಿಸಿ ಹುರಿದುಂಬಿಸುತ್ತಿದ್ದರು. ಅವರ ನಿಧನ ಹಿನ್ನೆಲೆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ರಾಜುಗೌಡ ಪ್ರಾರ್ಥಿಸಿದ್ದಾರೆ.