Publish Date: Mon, 12 Nov 2018 (14:44 IST)
Updated Date: Mon, 12 Nov 2018 (14:47 IST)
ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅನಂತಕುಮಾರ್ ನಿಧನದ ಹಿನ್ನಲೆಯಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ ಅಕಾಲಿಕ ಸಾವು ಭಾರತೀಯ ಜನತಾ ಪಕ್ಷಕ್ಕೆ ಹಾಗೂ ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.
ಕೆಂದ್ರ ಸಚಿವ ಅನಂತಕುಮಾರ್ ಕೇಸರಿ ಪಡೆಯ ಪ್ರಮುಖ ನಾಯಕರಾಗಿದ್ದರು. ವಿರೋಧ ಪಕ್ಷಗಳನ್ನು ತಮ್ಮ ಮಾತಿನ ಮೂಲಕವೇ ಕಟ್ಟಿ ಹಾಕುವಲ್ಲಿ ಬಹಳ ಪ್ರಾವಿಣರಾಗಿದ್ದರು. ನಿಜಕ್ಕೂ ಅವರು ನಿಧನರಾಗಿದ್ದು ವಿಷಾದಕರ ಸಂಗತಿಯಾಗಿದೆಂದು ಶಾಸಕ ನೆಹರು ಓಲೆಕಾರ ತಿಳಿಸಿದ್ದಾರೆ. ಇನ್ನೂ ರಸಗೊಬ್ಬರಕ್ಕೆ ಹಾವೇರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು ಎಂದ ಅವರು, ಪಕ್ಷ ಹಾಗೂ ಯುವಕರನ್ನು ಸಂಘಟಿಸುವ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.