Publish Date: Mon, 12 Nov 2018 (09:27 IST)
Updated Date: Mon, 12 Nov 2018 (09:32 IST)
ಬೆಂಗಳೂರು: ನಾನು ಕಪ್ಪು ಕೋಟು ಹಾಕಿಕೊಂಡು ಹೈಕೋರ್ಟ್ ನಲ್ಲಿ ಲಾಯರ್ ಆಗಿ ವೃತ್ತಿ ಜೀವನ ಆರಂಭಿಸಬೇಕಾದರೆ ನನ್ನ ಕೋಟು ತೆಗೆಸಿ ರಾಜಕಾರಣಕ್ಕೆ ನೀನು ಸರಿಯಾದ ವ್ಯಕ್ತಿ ಎಂದು ಗುರುತಿಸಿ ರಾಜಕೀಯಕ್ಕೆ ಕರೆತಂದ ಸ್ನೇಹಿತ ಎಂದು ಅನಂತ ಕುಮಾರ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.
ಅನಂತ ಕುಮಾರ್ ಪಾರ್ಥಿವ ದರ್ಶನ ಪಡೆಯಲು ಬಂದ ಬಿಎಸ್ ವೈ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಹಾಗೂ ಅವರ ನಡುವಿನ ನಿಕಟ ಸಂಬಂಧದ ಮೆಲುಕು ಹಾಕಿದ್ದಾರೆ.
ಸರಳ ಸಜ್ಜನಿಕೆಯ, ಪ್ರಾಮಾಣಿಕ ವ್ಯಕ್ತಿಯನ್ನು ಕಳೆದುಕೊಂಡು ಪಕ್ಷ, ರಾಜ್ಯ ಮತ್ತು ರಾಷ್ಟ್ರ ಬಡವಾಗಿದೆ. ನಮ್ಮ ಬೆಂಗಳೂರಿನಲ್ಲಿ ಈವತ್ತು, ಮೆಟ್ರೋ ಅಭಿವೃದ್ಧಿಯಾಗಿದೆ ಎಂದರೆ, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಬರಲು ಅನಂತ ಕುಮಾರ್ ಅವರೇ ಕಾರಣ.
ಅನಂತ ಕುಮಾರ್ ಮದುವೆಯಾದ ಸಂದರ್ಭದಲ್ಲಿ ಸುಮಾರು ಎರಡು ವರ್ಷಗಳ ಕಾಲ ಅವರ ಜತೆಯೇ ಇದ್ದು ನಾನು ರಾಜ್ಯಾಧ್ಯಕ್ಷನಾಗಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಇಂದು ಪ್ರಧಾನ ಪಕ್ಷವಾಗಿ ಬೆಳೆಯಲು ಅನಂತಕುಮಾರ್ ಕೊಡುಗೆ ಕಾರಣ ಎಂದು ಬಿಎಸ್ ವೈ ಬಣ್ಣಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.