Select Your Language

Notifications

webdunia
webdunia
webdunia
Tuesday, 8 April 2025
webdunia

ಯಡಿಯೂರಪ್ಪ ಸಿಎಂ ಆಗುತ್ತೇನೆ ಎಂದು ಹಗಲು ಗನಸು ಕಾಣುತ್ತಿದ್ದಾರೆ ಎಂದ ಸಿದ್ದರಾಮಯ್ಯ

ಬಿಜೆಪಿ
ಚಿಕ್ಕಮಗಳೂರು , ಭಾನುವಾರ, 11 ನವೆಂಬರ್ 2018 (18:48 IST)
ಬಿ.ಎಸ್. ಯಡಿಯೂರಪ್ಪನವರು ಸಿಎಂ ಆಗ್ತೇನೆಂದು ಹಗಲುಗನಸು ಕಾಣ್ತಿದ್ದಾರೆ. ಅವರಿಗೆ ಕಣ್ಣು ಮುಚ್ಚಿದ್ರೆ ವಿಧಾನಸೌಧದ ಮೂರನೇ ಮಹಡಿಯೇ ಕಾಣೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್‍.ಯಡಿಯೂರಪ್ಪ ವಾಮ ಮಾರ್ಗದಲ್ಲಿ ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವ್ರ ಹೇಳಿಕೆಗೆ ತಾಳಮೇಳ ಇರೋದಿಲ್ಲ ಎಂದು ಲೇವಡಿ ಮಾಡಿದ್ರು. ಅವರ ಪಕ್ಷಕ್ಕೆ ಬಹುಮತವೇ ಇಲ್ಲದೆ ಹೇಗೆ ಸಿಎಂ ಆಗ್ತಾರೆ ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರಕ್ಕೆ ಸಾಕಷ್ಟು ಸಮನ್ವಯತೆ ಇದೆ, ಅದಿಲ್ಲದೆ ಉಪಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದೇವಾ ಎಂದ್ರು. ಟಿಪ್ಪು ಜಯಂತಿಯನ್ನ ಹೊಸದಾಗಿ ಮಾಡ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಮಾಡಲಾಗುತ್ತಿದೆ ಎಂದೂ ಹೇಳಿದರು.

ಜನಾರ್ಧನ ರೆಡ್ಡಿ ಬಂಧನದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಬಿನಿ ಹಿನ್ನೀರಿನ ರೆಸಾರ್ಟ್ ನಲ್ಲಿ ಸಿಎಂ ಕುಮಾರಸ್ವಾಮಿ ವಿಶ್ರಾಂತಿ