Publish Date: Mon, 12 Nov 2018 (14:39 IST)
Updated Date: Mon, 12 Nov 2018 (14:41 IST)
ಅಂಬಿಡೆಂಟಾ ಕಂಪನಿಯ ಇಡಿ ಡೀಲ್ ಪ್ರಕರಣದಲ್ಲಿ 57 ಕೆ.ಜಿ.ಚಿನ್ನವನ್ನು ಕೊಟ್ಟ ರಾಜ್ಮಮಹಾಲ್ ಜ್ಯೂವೆಲರ್ಸ ಮಾಲೀಕ ರಮೇಶ ಮೇಲೆ ಪೊಲೀಸರ ದೈಹಿಕ ಹಲ್ಲೆಯನ್ನು ಖಂಡಿಸಿ ಛೇಂಬರ್ಸ್ ಆಫ್ ಕಾಮರ್ಸ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ ನಗರದಲ್ಲಿ ಅಂಬಿಡೆಂಟಾ ಕಂಪನಿಯ ಇಡಿಡೀಲ್ ಪ್ರಕರಣದಲ್ಲಿ 57 ಕೆ.ಜಿ.ಚಿನ್ನವನ್ನು ಕೊಟ್ಟ ರಾಜ್ಮಮಹಾಲ್ ಜ್ಯೂವೆಲರ್ಸ ಮಾಲೀಕ ರಮೇಶ ಮೇಲೆ ಪೊಲೀಸರ ದೈಹಿಕ ಹಲ್ಲೆಯನ್ನು ಖಂಡಿಸಿ ಬ್ರಹತ್ ಪ್ರತಿಭಟನೆ ನಡೆಸಲಾಯಿತು.
ಛೇಂಬರ್ಸ್ ಅಪ್ ಕಾಮರ್ಸನಿಂದ ಪ್ರಾರಂಭಗೊಂಡ ಪ್ರತಿಭಟನೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂತು. ಎಲ್ಲಾ ವ್ಯಾಪರಸ್ಥರು, ಉದ್ಯಮಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಾವು ವ್ಯಾಪಾರಿಗಳು ಸರ್ಕಾರಕ್ಜೆ ಸರಿಯಾಗಿ ತೆರಿಗೆ ಕಟ್ಟುತ್ತೇವೆ. ಇಷ್ಟಿದ್ದರೂ ಸಹ ರಾಜ್ ಮಹಾಲ್ ಮಾಲೀಕ ರಮೇಶನ ಮೇಲೆ ಹಲ್ಲೆ ನಡೆಸಿದ ಅಧಿಕಾರಿಯನ್ನು ತಕ್ಷಣಾ ಅಮಾನತು ಮಾಡುವಂತೆ ಆಗ್ರಹಿಸಲಾಯಿತು.