Publish Date: Tue, 13 Nov 2018 (08:59 IST)
Updated Date: Tue, 13 Nov 2018 (09:00 IST)
ಬೆಂಗಳೂರು: ನಿನ್ನೆ ವಿಧಿವಶರಾದ ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ ಕುಮಾರ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಇಂದು ಅವರ ನಿವಾಸದಿಂದ ಹೊರಟು ಮಲ್ಲೇಶ್ವರದ ಬಿಜೆಪಿ ಕಚೇರಿಯತ್ತ ಸಾಗಿದೆ.
ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿಯ ಅವರ ನಿವಾಸದಿಂದ ಬೆಳಿಗ್ಗೆಯೇ ಆರಂಭವಾದ ಅವರ ಅಂತಿಮ ಯಾತ್ರೆ ಎಸ್ ಪಿ ಸಮಾಜ ರಸ್ತೆ, ಮಿನರ್ವ ಸರ್ಕಲ್, ಭಾಷ್ಯಂ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರದತ್ತ ಸಾಗಿದೆ.
ಈ ಸಂದರ್ಭದಲ್ಲಿ ಸಾವಿರಾರು ಜನರು ಅವರಿಗೆ ಭಾವುಕ ವಿದಾಯ ಹೇಳಿದ್ದಾರೆ. ಇಂದು ಮಧ್ಯಾಹ್ನ ಚಾಮರಾಜಪೇಟೆಯ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತಿಮ ಕ್ರಿಯೆಗಳು ನಡೆಯಲಿದೆ. ಸಹೋದರ ನಂದಕುಮಾರ್ ಅನಂತ ಕುಮಾರ್ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.