Publish Date: Thu, 22 Dec 2022 (11:38 IST)
Updated Date: Thu, 22 Dec 2022 (10:39 IST)
ಬೆಳಗಾವಿ : ನಮ್ಮ ಮುಖ್ಯಮಂತ್ರಿ ದುರ್ಬಲ ಸಿಎಂ. ಕೇಂದ್ರ ಸಚಿವ ಅಮಿತ್ ಶಾ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕರ್ನಾಟಕದ ಮುಖ್ಯಮಂತ್ರಿ ವೀಕ್ ಸಿಎಂ. ಕೇಂದ್ರ ಗೃಹ ಸಚಿವರು ಕರೆದು ಮಾತಾನಾಡಿದ್ರೂ ಗಲಾಟೆ ಆಗ್ತಿದೆ.
ನಮ್ಮ ಸಿಎಂ ಗಟ್ಟಿ ಧ್ವನಿಯಲ್ಲಿ ಹೇಳಬೇಕಿತ್ತು, ಆದರೂ ದೊಡ್ಡ ಹೇಳಿಕೆಯನ್ನೇನು ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಶಾಂತಿ ಕಾಪಾಡಿ ಅಂದರೂ, ಮಹಾರಾಷ್ಟ್ರದವರು ಶಾಂತಿ ಕಾಪಾಡ್ತಿಲ್ಲ. ಅಮಿತ್ ಶಾ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಟೀಕಿಸಿದ್ದಾರೆ.