Publish Date: Sun, 18 Dec 2022 (20:34 IST)
Updated Date: Sun, 18 Dec 2022 (20:41 IST)
ರಾಜ್ಯದಲ್ಲಿ ಉಗ್ರರ ದಾಳಿ ಎಲ್ಲೆಡೆ ನಡೆಯುತ್ತಿದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಓಟ್ ಬ್ಯಾಂಕಿಗಾಗಿ ಪ್ರಯತ್ನ ಮಾಡುತ್ತಿದೆ, ದೇಶದ ಭದ್ರತೆ, ನಾಗರೀಕರ ಸುರಕ್ಷತೆ ಕಾಂಗ್ರೆಸ್ಸಿಗರಿಗೆ ಬೇಕಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ . ಇಂದು ಬೆಳೆಕಹಳ್ಳಿಯಲ್ಲಿ ದಿವಂಗತ ಅನಂತ್ ಕುಮಾರ್ ರವರ ನೂತನ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾಧ್ಯಮಗಳಿಗೆ ಹೇಳಿಕೆಯನ್ನ ನೀಡಿದರು. ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ಹೆಚ್ಚಾಗಿ ಉಗ್ರ ದಾಳಿಗಳಾಗಿಲ್ಲ. ಆದ್ರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೀಪಾವಳಿ ಪಟಾಕಿ ರೀತಿಯಲ್ಲಿ ದೇಶದಲ್ಲಿ ಬಾಂಬ್ ಗಳು ಬ್ಲಾಸ್ಟ್ ಆಗುತ್ತಿದ್ದವು. ಕರ್ನಾಟಕದ ಜನತೆ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಎನ್ಐಎ ಬರಬೇಕು ಎಂದು ಬಿಜೆಪಿ ಶಾಸಕರು ಮತ್ತು ಸಂಸದರು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ತನಿಖೆಗೆ ಮುನ್ನವೇ ತಮ್ಮ ಬ್ರದರ್ಸ್ ಗಳನ್ನು ಉಳಿಸಿಕೊಳ್ಳಲು ಕ್ಲೀನ್ ಚಿಟ್ ನೀಡುತ್ತಿದ್ದಾರೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.