Select Your Language

Notifications

webdunia
webdunia
webdunia
Wednesday, 9 April 2025
webdunia

ಡಿಸೆಂಬರ್​ 25ಕ್ಕೆ ರೆಡ್ಡಿ ಕ್ಲೈಮ್ಯಾಕ್ಸ್..?

ಡಿಸೆಂಬರ್​ 25ಕ್ಕೆ ರೆಡ್ಡಿ ಕ್ಲೈಮ್ಯಾಕ್ಸ್
bangalore , ಭಾನುವಾರ, 18 ಡಿಸೆಂಬರ್ 2022 (20:10 IST)
ದಿನದಿನಕ್ಕೂ ಮಾಜಿ ಸಚಿವ ಜನಾರ್ದನರೆಡ್ಡಿ ರಾಜಕೀಯ ನಡೆ ಕುತೂಹಲ ಕೆರಳಿಸಿದೆ. ಜನಾರ್ದನ ರೆಡ್ಡಿ ಅವರು ಇದೇ ಡಿಸೆಂಬರ್​ 25ರಂದು ಹೊಸ ರಾಜಕೀಯ ಪಕ್ಷವನ್ನ ಘೋಷಣೆ ಮಾಡಲಿದ್ದಾರೆ ಎಂಬ ಸುಳಿವು ನೀಡಿದ್ರು. ಆದ್ರೆ, ಮತ್ತೆ ಬಿಜೆಪಿ ಸೇರಲು ಡೆಡ್​ಲೈನ್ ಮುಂದೂಡಿದ್ರಾ ಅನ್ನೋ ಚರ್ಚೆ ಶುರುವಾಗಿದೆ. ಡಿಸೆಂಬರ್​ 18ಕ್ಕೆ ಎಲ್ಲದರ ಬಗ್ಗೆ ಪ್ರತಿಕ್ರಿಯೆ ನೀಡ್ತೀನಿ ಅಂದಿದ್ದ ರೆಡ್ಡಿ, ಇದೀಗ ದಿಢೀರ್‌ ದಿನಾಂಕ ಬದಲಿಸಿದ್ದಾರೆ. ಬಿಜೆಪಿಗೆ ಬೆದರಿಸಲು ಮುಂದಾದ್ರಾ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೀತಿದೆ. ಡಿಸೆಂಬರ್‌ 25ಕ್ಕೆ ರಾಜಕೀಯ ಎಂಟ್ರಿ ಬಗ್ಗೆ ಹೇಳ್ತಿನಿ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಈಗಾಗಲೇ ಗಣಿಧಣಿ ಜೊತೆ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಮಾತುಕತೆ ನಡೆಸಿದ್ರೆ, ಮತ್ತೊಂದೆಡೆ ರೆಡ್ಡಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಶ್ರೀರಾಮುಲು ಸಹ ಹರಸಾಹಸಪಡ್ತಿದ್ದಾರೆ. ಪರಮಾಪ್ತನಿಗಾಗಿ ಕೇಂದ್ರ ನಾಯಕರ ಜೊತೆಗೂ ಸಚಿವ ಶ್ರೀರಾಮುಲು ಚರ್ಚೆ ನಡೆಸಿದ್ದು, ಜನಾರ್ದನ ರೆಡ್ಡಿ ನಡೆ ಹೊಸ ಪಾರ್ಟಿಯತ್ತನಾ..? ಮತ್ತೆ ಹಳೇ ದೋಸ್ತಿನಾ..? ಅನ್ನೋ ಕುತೂಹಲ ಡಿಸೆಂಬರ್‌ 25ಕ್ಕೆ ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪಗೆ ಮತ್ತೆ ಮಂತ್ರಿಸ್ಥಾನ ಸಿಗಲಿ