Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಕಾರಜೋಳ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಕಾರಜೋಳ ವಾಗ್ದಾಳಿ
ಬಾಗಲಕೋಟೆ , ಭಾನುವಾರ, 18 ಡಿಸೆಂಬರ್ 2022 (19:09 IST)
ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವೆ ಗಡಿ ವಿವಾದ ಸಂಬಂಧ ಬೊಮ್ಮಾಯಿ ವೀಕ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಗೋವಿಂದ ಕಾರಜೋಳ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಅವನೇ 5 ವರ್ಷ ಇದ್ದನಲ್ಲ ಏನು ಮಾಡುತ್ತಿದ್ದ. ಯಾಕೆ ಆಗ ಗಡಿ ಸಮಸ್ಯೆ ಸರಿಪಡಿಸಲಿಲ್ಲ. ಸುಮ್ಮನೆ ಬಾಯಿ ಚಪಲಕ್ಕೆ ಏನೇನೋ ಮಾತನಾಡಬಾರದು. 60 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸಮಸ್ಯೆ ಸರಿಪಡಿಸಬಹುದಿತ್ತು. ಅಂದಿನ ಕಾಂಗ್ರೆಸ್ ತ್ರಿಬಲ್ ಇಂಜಿನ್ ಸರ್ಕಾರ ಯಾಕೆ ಮಾಡಲಿಲ್ಲ. ಸಮಸ್ಯೆ ಬಗೆಹರಿಸಬೇಡಿ ಎಂದು ಯಾರಾದರೂ ಆಣೆ ಹಾಕಿದ್ದರಾ? ಎಂದು ಮಾಡಿದ್ದಾರೆ. ಇನ್ನೂ ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆ ಬಿಸಿ ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉದ್ದೇಶ ಈಡೇರೋದರಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆಗ್ತಿದೆ. ಉತ್ತರ ಕರ್ನಾಟಕದ ಶಾಸಕರು ಏನೇನು ಚರ್ಚೆ ಆಗಬೇಕು ಅದರ ಬಗ್ಗೆ ಇಲಾಖೆವಾರು ಒಂದೊಂದಾಗಿ ಚರ್ಚೆ ಮಾಡಿದ್ರೆ ಹೆಚ್ಚು ಅರ್ಥಪೂರ್ಣವಾಗುತ್ತೆ. ಸರ್ಕಾರದ ಗಮನ ಸೆಳೆಯಬಹುದು, ಸಾರ್ವಜನಿಕರಿಗೂ ಗೊತ್ತಾಗುತ್ತೆ. ಅದರ ಬಗ್ಗೆ ಒತ್ತು ಕೊಡುವ ಕೆಲಸ ಆಗಬೇಕು. ಉತ್ತರ ಕರ್ನಾಟಕದಲ್ಲಿ ಸರಕಾರಿ ಶಾಲೆಗಳು ಕಡಿಮೆ ಇರೋ ಬಗ್ಗೆ ಚರ್ಚೆ ಆಗಬೇಕು ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿಗೆ ಅಮಾಯಕ ನೋಬೆಲ್ ನೀಡಿ-ಆರ್​.ಅಶೋಕ್​