Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಶವಸಂಸ್ಕಾರಕ್ಕೂ 3 ದಿನ ಕ್ಯೂ!

ಚೀನಾದಲ್ಲಿ ಶವಸಂಸ್ಕಾರಕ್ಕೂ 3 ದಿನ ಕ್ಯೂ!
bangalore , ಭಾನುವಾರ, 18 ಡಿಸೆಂಬರ್ 2022 (18:06 IST)
ಕೋವಿಡ್‌ ಅಂಟಿಸಿದ ಅಪಖ್ಯಾತಿ ಹೊತ್ತಿದ್ದ ಚೀನಾಗೆ ಈಗ ಕೊರೋನಾ ವೈರಸ್‌ ತಿರುಗುಬಾಣ ಆಗಿದೆ. ಪ್ರಕರಣಗಳ ವೃದ್ಧಿ ಮಾತ್ರವಲ್ಲ, ನಿತ್ಯ ನೂರಾರು ಸಾವುಗಳು ಸಂಭವಿಸುತ್ತಿವೆ. ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆ 3 ದಿನ ಶವಗಳನ್ನು ಕ್ಯೂನಲ್ಲಿ ಇರಿಸಬೇಕಾದ ಸ್ಥಿತಿ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಸದಾ ತನ್ನ ವೈಫಲ್ಯ ಮುಚ್ಚಿಡಲು ಯತ್ನಿಸುವ ಚೀನಾ ಸರ್ಕಾರವು ಕೋವಿಡ್‌ನಿಂದ ಸಾವಿಗೀಡಾದವರ ಅಧಿಕೃತ ಅಂಕಿಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಡಿ.4ರಿಂದ ಕೋವಿಡ್‌ ಸಾವಿನ ಪ್ರಕಟಣೆಯನ್ನೇ ಅದು ನಿಲ್ಲಿಸಿದೆ. ಇದಲ್ಲದೆ ಕೋವಿಡ್‌ ಹಾವಳಿ 3 ವರ್ಷದಿಂದ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೇವಲ 5,235 ಜನರು ಮಾತ್ರ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ ಬೀಜಿಂಗ್‌ ಹಾಗೂ ಚೀನಾದ ಇತರ ನಗರಗಳ ಬೀದಿ, ರುದ್ರಭೂಮಿಗಳಲ್ಲಿ ಸಂಚರಿಸಿದಾಗ ವಾಸ್ತವಿಕ ಚಿತ್ರಣವೇ ಬೇರೆ ಗೋಚರಿಸುತ್ತಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್​ ಶಾ ಸೂಚನೆಗೂ ‘ಮಹಾ’ ಕ್ಯಾತೆ..!