Publish Date: Sun, 18 Dec 2022 (17:36 IST)
Updated Date: Sun, 18 Dec 2022 (17:49 IST)
ಕಳೆದ 3 ತಿಂಗಳಿನಿಂದ ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಖ್ಯಾತ ಇರಾನಿ ನಟಿಯನ್ನ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ವಿಷಯಗಳನ್ನು ಬಿತ್ತಿದ್ದಾರೆ ಹಾಗೂ ಅವ್ಯವಸ್ಥೆಯನ್ನು ಪ್ರಚೋದಿಸಿದ್ದಾರೆ ಎನ್ನುವ ಆರೋಪದ ಮೇಲೆ ಇರಾನಿ ನಟಿ ತರನೆಹ್ ಅಲಿದೋಸ್ತಿ ಅವರನ್ನ ಬಂಧಿಸಿದ್ದಾರೆ. ಇದೇ ತಿಂಗಳ ಡಿಸೆಂಬರ್ 8ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ನೀವು ಮೌನವಾಗಿದ್ದೀರಿ ಅಂದರೆ, ಎದುರಾಳಿಯ ದಬ್ಬಾಳಿಕೆಯನ್ನು ಬೆಂಬಲಿಸಿದಂತೆ. ಈ ರಕ್ತಪಾತವನ್ನು ನೋಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರೋದು ಮಾನವೀಯತೆಗೆ ಮಾಡಿದ ಅಪಮಾನ ಎಂದು ಪೋಸ್ಟ್ ಹಾಕಿದ್ದರು. ಅವರು ಪೋಸ್ಟ್ ಹಾಕಿದ್ದ ದಿನವೇ ಇರಾನ್‌ನಲ್ಲಿ 23 ವರ್ಷದ ಯುವಕನೊಬ್ಬನನ್ನ ಗಲ್ಲಿಗೇರಿಸಲಾಗಿತ್ತು.