Select Your Language

Notifications

webdunia
webdunia
webdunia
webdunia

ಕೋಳಿ ಮೇಲೆ ಕಂಪ್ಲೆಂಟ್‌

Complaint on chicken
bangalore , ಭಾನುವಾರ, 18 ಡಿಸೆಂಬರ್ 2022 (15:04 IST)
ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ. ನೆರೆಮನೆಯವರನ್ನು ದೂರಿ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್‌ ಖಾತೆ ಪೋಸ್ಟ್‌ ಹಾಕಿದ್ದಾನೆ. ಪೋಸ್ಟ್‌ನಲ್ಲಿ ಮನೆಯ ವಿಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ.  ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ ಎರಡು ವರ್ಷದ ಮಗ ನಿದ್ರೆಯಿಂದ ಎದ್ದುಬಿಡ್ತಾನೆ. ಕೋಳಿ ಕೂಗೋದರಿಂದ ನಮಗೂ ನಿದ್ದೆ ಬರ್ತಿಲ್ಲ. ಅಕ್ಕಪಕ್ಕದವರಿಗೂ ನಿದ್ರೆ ಸಮಸ್ಯೆ ಎದುರಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರು ನೀಡಿ ಟ್ವೀಟ್‌ ಮಾಡಿರುವ ಆ ವ್ಯಕ್ತಿ, ಟ್ವಿಟ್ಟರ್‌ನಲ್ಲಿ ಪೊಲೀಸ್‌ ಕಮಿಷನರ್‌, ಡಿಸಿಪಿಗೆ ಟ್ಯಾಗ್‌ ಮಾಡಿ ದೂರಿದ್ದಾನೆ.  

Share this Story:

Follow Webdunia kannada

ಮುಂದಿನ ಸುದ್ದಿ

ಡಿ. 21ರಿಂದ 2 ದಿನಗಳ ಕಾಲ ಮಳೆ