Select Your Language

Notifications

webdunia
webdunia
webdunia
webdunia

ಅಂಬರ್‌ಗ್ರಿಸ್ ವಂಚನೆ, ಮೂವರ ಬಂಧನ

Ambergris scam
ಉಡುಪಿ , ಭಾನುವಾರ, 16 ಜುಲೈ 2023 (17:20 IST)
ಉಡುಪಿಯ ಬೈಂದೂರಿನಲ್ಲಿ ಅಂಬರ್‌ಗ್ರಿಸ್ ಎಂದು ಹೇಳಿ ಮಾರಾಟಕ್ಕೆ ‌ಯತ್ನ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. 10 ಲಕ್ಷ ರೂ. ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಿರಂಜನ್ ಎಸ್, ಮಿಲನ್ ಮೋನಿಶ್ ಶೆಟ್ಟಿ, ಪೃಥ್ವಿ ಡಾಮ್ನಿಕ್ ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ಬಂಧಿತ ಆರೋಪಿಗಳಿಂದ ಸುಮಾರು 3 ಕೆ.ಜಿ 910 ಗ್ರಾಂ ತೂಕದ ಅಂಬರ್‌ಗ್ರಿಸ್​​​ನಂತಿರುವ​​​ ವಸ್ತುವನ್ನು‌ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಬರ್ ಗ್ರೀಸ್ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಸಕ್ರಿಯವಾಗಿದ್ದು, ಯಾರು ಯಾಮಾರದಂತೆ ಪೊಲೀಸರು ಮನವಿ ಮಾಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ