Select Your Language

Notifications

webdunia
webdunia
webdunia
webdunia

ಸ್ನೇಹಿತನನ್ನೇ ಮುಗಿಸಿದ್ದ ಕಿರಾತಕರು ಅರೆಸ್ಟ್

The auctioneers who finished off the friend were arrested
bangalore , ಮಂಗಳವಾರ, 11 ಜುಲೈ 2023 (13:59 IST)
ಬೆಂಗಳೂರಿನ ಚನ್ನನಾಯಕನಪಾಳ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣವನ್ನು ಪೀಣ್ಯಾ ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್​, ಪುಟ್ಟ ಹಾಗೂ ದಯಾನಂದ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಹೆಗ್ಗನಹಳ್ಳಿ ನಿವಾಸಿ ಅನಂದ್ ಎಂಬಾತನನ್ನು ಕೊಲೆ ಮಾಡಿ ಕಿರಾತಕರು ಸುಟ್ಟು ಹಾಕಿದ್ದರು.. ಇನ್ನು ತಮಿಳುನಾಡು ಮೂಲದ ಆನಂದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಆರೋಪಿ ಸತೀಶ್ ಬಳಿ ಅಡುಗೆ ಭಟ್ಟನಾಗಿ ಕೆಲಸ ಮಾಡ್ತಿದ್ದ.. ಆದರೆ ಇತ್ತೀಚೆಗೆ ಆನಂದನೇ ಸ್ವಂತ ಅಡುಗೆ ಕಂಟ್ರಾಕ್ಟ್ ಆರಂಭಿಸಿದ್ದ. ಇದು ಸತೀಶನ ವಹಿವಾಟಿಗೆ ಹೊಡೆತ ಬಿದ್ದಿತ್ತು. ಹಾಗಾಗಿ ಆನಂದನನ್ನು ಮುಗಿಸಲು ಸತೀಶ್ ತೀರ್ಮಾನಿಸಿದ್ದ, ಪಾರ್ಟಿ ನೆಪದಲ್ಲಿ ಸತೀಶ್​ನನ್ನು ತನ್ನ ಮನೆಗೆ ಕರೆಸಿಕೊಂಡು ಸ್ನೇಹಿತರೊಂದಿಗೆ ಸೇರಿ ಆನಂದನ ಹತ್ಯೆ ಮಾಡಿದ್ದಾನೆ.. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಥಮಿಕ ಶಾಲಾ ಹಂತದಲ್ಲಿ ಎನ್‌ಇಪಿ ಜಾರಿ ಮಾಡೋದಿಲ್ಲ : ಮಧು ಬಂಗಾರಪ್ಪ