Publish Date: Thu, 06 Jul 2023 (14:09 IST)
Updated Date: Thu, 06 Jul 2023 (13:13 IST)
ಬೆಂಗಳೂರಿನ ಜೀವನ ಭೀಮಾನಗರದ ಟೆಕ್ಕಿ ಆಕಾಂಕ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಪಿತ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿಚಾರಣೆ ವೇಳೆ ಆಕಾಂಕ್ಷ ಕೊಲೆ ಮಾಡಿದ್ದ ಕಹಾನಿ ಬಯಲಾಗದೆ. ಮೃತ ಆಕಾಂಕ್ಷ ಬೇರೊಬ್ಬನ ಜೊತೆ ಪ್ರೀತಿಯಲ್ಲಿದ್ದಿದ್ದನ್ನ ಆರೋಪಿ ತಿಳಿದುಕೊಂಡಿದ್ದ. ಇದು ಆತನಿಗೆ ತಿಳಿದ ಮೇಲೆ, ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಅಕಾಂಕ್ಷ ಹೇಳಿದ್ದಳು. ಆದರೂ ಆಕೆಯನ್ನ ಬಿಡದ ಆರೋಪಿ ಅರ್ಪಿತ್ ಮದುವೆಯಾಗುವಂತೆ ಒತ್ತಾಯ ಮಾಡಿದ್ದ.. ಈ ವೇಳೆ ಆಕಾಂಕ್ಷ ಮದುವೆಯಾಗಲ್ಲ ಅಂದಿದ್ದಾಳೆ. ಇದೇ ಕಾರಣಕ್ಕೆ ಅರ್ಪಿತ್ ಉಸಿರುಗಟ್ಟಿಸಿ ಆಕಾಂಕ್ಷಳನ್ನ ಹತ್ಯೆ ಮಾಡಿದ್ದಾನೆ.ಬಳಿಕ ಬೆಂಗಳೂರಿನಿಂದ ಹೊರಟವನು ಉತ್ತರ ಭಾರತವನ್ನ ಸೇರಿದ್ದ.. ಇದೀಗ ಆತನನ್ನ ಪೊಲೀಸರು ಬಂಧಿಸಿದ್ದಾರೆ.