Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ತೊರೆದವರಿಗೆ ನೋಟಿಸ್

Notice to Congress leavers
bangalore , ಗುರುವಾರ, 6 ಜುಲೈ 2023 (13:05 IST)
ಕಾಂಗ್ರೆಸ್ ತೊರೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಿದ ಪುರಸಭೆ ಸದಸ್ಯರಿಗೆ ರಾಯಚೂರು ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.. ಲಿಂಗಸುಗೂರ ಪುರಸಭೆಯ ಫಾತಿಮಾ.ಬಿ, ಮೌಲಾಸಾಬ್, ಪ್ರಮೋದ್ ಕುಮಾರ ಮತ್ತು ಶರಣಪ್ಪ ಎಂಬ ನಾಲ್ವರು ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ ಕಾಂಗ್ರೆಸ್ ತೊರೆದ ಆರೋಪದ ಮೇಲೆ, ಕಾಂಗ್ರೆಸ್ ಮುಖಂಡ ಭೂಪನಗೌಡ ನಾಲ್ವರು ಸದಸ್ಯರ‌ ವಿರುದ್ದ ದೂರು ದಾಖಲಿಸಿದ್ದರು.. ದೂರನ್ನ ಪರಿಗಣಿಸಿದ ಜಿಲ್ಲಾಧಿಕಾರಿಗಳು ಪುರಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸುವ ವಿಚಾರವಾಗಿ ನೋಟಿಸ್ ನೀಡಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ನಾಲ್ವರನ್ನ ಅನರ್ಹಗೊಳಿಸಲು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ತಡೆದು ವಿದ್ಯಾರ್ಥಿಗಳ ಪ್ರೊಟೆಸ್ಟ್