Select Your Language

Notifications

webdunia
webdunia
webdunia
webdunia

ಬಸ್ ತಡೆದು ವಿದ್ಯಾರ್ಥಿಗಳ ಪ್ರೊಟೆಸ್ಟ್

Students protest by stopping the bus
ಬೀದರ್ , ಗುರುವಾರ, 6 ಜುಲೈ 2023 (12:58 IST)
ಶಾಲಾ-ಕಾಲೇಜಿಗೆ ತೆರಳಲು ಬಸ್​ ಸಮಸ್ಯೆಯಾಗುತ್ತಿದ್ದ ಹಿನ್ನೆಲೆ, ಹೆದ್ದಾರಿಯಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀದರ್​ನ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ನಿನ್ನೆ ಒಂದು ಗಂಟೆ ಕಾಲ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಶಾಲಾ-ಕಾಲೇಜಿಗೆ ತೆರಳುವಾಗ ಬಸ್ ಚಾಲಕರು ಬಸ್ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಸುಮಾರು ವರ್ಷಗಳಿಂದ ಬಸ್ ಸಮಸ್ಯೆ ಇದೆ, ಪ್ರತಿ ದಿನ ಯಾವುದೇ ಬಸ್ ಸ್ಟಾಪ್‌ ಕೊಡ್ತಿಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿದಿನ ತಡವಾಗಿ ಕಾಲೇಜಿಗೆ ತೆರಳುತ್ತಿದ್ದೇವೆ, ಪರೀಕ್ಷೆಗೂ ಕೂಡ ತಡವಾಗಿ ಹೋಗುತ್ತಿದ್ದೇವೆ. ಆದ್ದರಿಂದ ಬಸ್ ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಫೀಸ್​ಗೆಂದು ಹೋದವ ಶವವಾಗಿ ಪತ್ತೆ