Select Your Language

Notifications

webdunia
webdunia
webdunia
webdunia

ಆರೋಗ್ಯ, ಶುಚಿತ್ವದಲ್ಲಿ ಉದ್ಯೋಗ ಸೃಷ್ಟಿಸಲು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ

ಆರೋಗ್ಯ, ಶುಚಿತ್ವದಲ್ಲಿ ಉದ್ಯೋಗ ಸೃಷ್ಟಿಸಲು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ
bangalore , ಶುಕ್ರವಾರ, 27 ಆಗಸ್ಟ್ 2021 (19:27 IST)
ಬೆಂಗಳೂರು: 
ಭಾರತದ ಮಹಿಳೆಯರಿಗೆ ಆರೋಗ್ಯ ಮತ್ತು ಶುಚಿತ್ವ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ಸಮಯದಲ್ಲಿ “ರೆಕಿಟ್” ಹಾಗೂ “ಯುಎನ್ ವುಮೆನ್” ಎಂಬ ಅಂತರಾಷ್ಟ್ರೀಯ ಸಂಸ್ಥೆಗಳು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ಮಹಿಳೆಯರಿಗಾಗಿ ಉದ್ಯೋಗ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿವೆ. 
 
ಯುಎನ್ ವುಮೆನ್ ಸಂಸ್ಥೆಯ ಭಾರತದ ಪ್ರತಿನಿಧಿ ಸುಸಾನ್ ಫರ್ಗುಸ್ ಮತ್ತು ರೆಕಿಟ್ ಸಂಸ್ಥೆಯ ದಕ್ಷಿಣ ಏಷ್ಯಾದ ಹಿರಿಯ ಅಧ್ಯಕ್ಷ ಗೌರವ ಜೈನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 
ನಂತರ ಮಾತನಾಡಿದ ಗೌರವ ಜೈನ್, ರಿಕಿಟ್ಟ್ ಸಂಸ್ಥೆಯು ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವಕ್ಕೆ ಅವಕಾಶ ನೀಡುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಗುರಿತಾಯಿತು. ಭಾರತದ ಮಹಿಳಾ ಸಬಲೀಕರಣ ಕ್ರಾಂತಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮತ್ತು ಯುಎನ್ ವುಮೆನ್ ಸಂಸ್ಥೆಯು ಜೊತೆಗೂಡಿ ಆರೋಗ್ಯ, ನೈರ್ಮಲ್ಯ ಹಾಗೂ ಶುಚಿತ್ವ ಕ್ಷೇತ್ರದಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ಮುಂದಾಗಿದೆ. ನಗರ ಪ್ರದೇಶದಲ್ಲಿ ಮಹಿಳೆಯರು ಹೆಚ್ಚು ಉದ್ಯೋಗದಲ್ಲಿ ತೊಡಗಿ ಆರ್ಥಿಕ ಸ್ವಾವಲಂಬಿಯಾಗಿದ್ದಾರೆ. ಪ್ರಸ್ತುತ ನಮ್ಮ ಗಮನ ಗ್ರಾಮೀಣ ಭಾಗದ ಮಹಿಳೆಯರನ್ನೂ ಸ್ವ-ದ್ಯೋಗಿಗಳಾಗಿ ಮಾಡಲಾಗುತ್ತಿದೆ. ನಮ್ಮ ಕಾರ್ಯಕ್ರಮಕ್ಕೆ ಹಾರ್ಪಿಕ್ ವರ್ಲ್ಡ್ ಕಾಲೇಜ್, ಡೆಟಾಲ್ ಹೈಜಿನ್ ನಂಥ ಕಂಪನಿಗಳು ನಮ್ಮ ಕೆಲಸಕ್ಕೆ ಬೆಂಬಲ ಸೂಚಿಸಲಾಗುತ್ತಿದೆ. ಯುಎನ್ ವುಮೆನ್ ಸಂಸ್ಥೆಯು 2 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿದೆ.
health

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಕಾರದ ತಪ್ಪಿದೆ -ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ