ಬೆಂಗಳೂರು: ಕೊರೋನಾ, ಲಾಕ್ ಡೌನ್ ಕಳೆದ ವರ್ಷ ಅದೆಷ್ಟೋ ಮಂದಿಯ ಉದ್ಯೋಗಕ್ಕೆ ಕುತ್ತು ತಂದಿತ್ತು. ಈ ಬಾರಿ ಮತ್ತಷ್ಟು ಮಂದಿಯ ಉದ್ಯೋಗಕ್ಕೆ ಸಂಚಕಾರ ತಂದಿದೆ.
ಇಂಡಿಯನ್ ಎಕಾನಮಿ ಮಾನಿಟರಿಂಗ್ ಸೆಂಟರ್ (ಸಿಎಂಐಇ) ಸಮೀಕ್ಷೆ ಪ್ರಕಾರ, ಮೇ ತಿಂಗಳ ಒಂದರಲ್ಲೇ 15 ಮಿಲಿಯನ್ ಮಂದಿಗೆ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಪೈಕಿ ನಗರ ಪ್ರದೇಶದಲ್ಲಿ ಉದ್ಯೋಗ ಕಳೆದುಕೊಂಡ ಪ್ರಮಾಣ ಶೇ. 18 ಕ್ಕೇರಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಮೇ 2021 ರಲ್ಲಿ ನಿರುದ್ಯೋಗ ಪ್ರಮಾಣ ವಿಪರೀತ ಹೆಚ್ಚಳವಾಗಿದೆ. ಕೊರೋನಾ ಎರಡನೇ ಅಲೆ ತಡೆಯಲು ಕೈಗೊಂಡ ಎರಡು ತಿಂಗಳ ಲಾಕ್ ಡೌನ್ ಆರ್ಥಿಕತೆ ಮೇಲೆ ಮತ್ತಷ್ಟು ಹೊಡೆತ ನೀಡಿದೆ ಎಂದು ಸಿಎಂಐಇ ಹೇಳಿದೆ.