ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಕಾರದ ತಪ್ಪಿದೆ ಸರಕಾರದ ವೈಫಲ್ಯ ಇದೆ ಅಲ್ಲದೇ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ರು. ರಾಮನಗರ ಜಿಲ್ಲೆ ಚನ್ನಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದ್ರು. ನಮ್ಮ ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆ ನಡೆಯಬಾರದಿತ್ತು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದೇ ಮೊದಲ ತಪ್ಪು, ರಾಜ್ಯದಲ್ಲಿ ಮೊಟ್ಕ ದಂಧೆ ಸೇರಿದಂತೆ ಹಲವು ಸಮಾಜ ಗಾತುಕ ದಂಧೆಗಳು ನಡೆಯುತ್ತಿವೆ ಇದನ್ನ ತಡೆಯಲು ಪೊಲೀಸ್ ಇಲಾಖೆಯಲ್ಲಿ ಅಸಮರ್ಥತೆ ಎದ್ದು ಕಾಣಿಸುತ್ತಿದೆ ಎಂದ ಅವರು ಪೊಲೀಸ್ ಅಧಿಕಾರಿಗಳನ್ನ ಹಣ ಪಡೆದು ವರ್ಗಾವಣೆ ಮಾಡುವುದನ್ನ ನಿಲ್ಲಿಸುವ ವರೆಗೆ ಪೊಲೀಸ್ ಇಲಾಖೆ ನ್ಕ್ರಿಯವಾಗಿರುತ್ತೆ ನನಗೆ ಈ ಸಂಬಂಧ ಹಲವು ಮಾಹಿತಿಗಳು ಇವೆ ಎಲ್ಲವನ್ನ ಬಹಿರಂಗವಾಗಿ ಹೇಳಲು ಸಾದ್ಯವಿಲ್ಲ, ಸರಕಾರ ಮೊದಲು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು, ಯುಪಿ ಹಾಗೂ ದೆಹಲಿಯಲ್ಲಿ ನಡೆಯುತ್ತಿದ್ದ ಘಟನೆಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿವೆ ಅಂತಾ ಕಳವಳ ವ್ಯಕ್ತ ಪಡಿಸಿದ್ರು. ಇಂತಹ ಘಟನೆಗಳಲ್ಲಿ ಕಠಿಣ ಕಾನೂನುಗಳನ್ನ ತರಬೇಕಿದೆ ಎಂದು ಸರಕಾರವನ್ನ ಆಗ್ರಹಿಸಿದ್ರು. ಗೃಹ ಸಚಿವರು ಅಂತಹ ಪದಗಳನ್ನ ಯಾಕೆ ಬಳಸಿದ್ರು ಅನ್ನೊದು ಗೊತ್ತಿಲ್ಲ, ಈ ಹಿಂದೆ ಇದೇ ಗೃಹ ಸಚಿವರು ನಾನು ಮಂತ್ರಿ ಆಗುತ್ತಿದಂತೆ ನನಗೆ ನಿದ್ದೆ ಬರುತ್ತಿಲ್ಲ ಅಂತಾ ಹೇಳಿಕೆ ನೀಡಿದ್ರು, ಪೊಲೀಸ್ ಇಲಾಖೆ ನಿಭಾಸುವಲ್ಲಿ ಗೃಹ ಸಚಿವರಿಗೆ ಸಮಸ್ಯೆ ಇರಬಹುದೆನೋ ಅಂತಾ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಲೆವಡಿ ಮಾಡಿದ್ರು. ಇನ್ನೂ ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ಮಾತನಾಡಿ ಅಲ್ಲಿ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ 3 ಪಕ್ಷದ ಮುಖಂಡರು ಅಭ್ಯರ್ಥಿಗಳನ್ನ ಹಾಕಿ ಅಧ್ಯಕ್ಷ ಚುನಾವಣೆ ನಡೆಸಿದ್ರು ಅಂತಾ ಹೇಳಿದ್ರು. ಜಿ.ಟಿ.ದೇವೇಗೌಡ ಪಕ್ಷ ಬಿಟ್ಟ ವಿಚಾರವಾಗಿ 2008 ರಲ್ಲಿ ಪಕ್ಷ ಬಿಟ್ಟು ಜಿಟಿಡಿ ಹೋಗಿದ್ರು ಇದೀಗ ಮತ್ತೆ ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತಾನಡುತ್ತೇನೆ, ಉತ್ತರ ಕರ್ನಾಟಕದಲ್ಲಿ ನನ್ನ ಪ್ರವಾಸದ ವೇಳೆ ಜನ್ರು ಜೆಡಿಎಸ್ ಪಕ್ಷದ ಬಗ್ಗೆ ಮಾತಾನಡುತ್ತಾರೆ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹಿನ್ನಡೆ ಆಗುವ ಪ್ರಶ್ನೆ ಇಲ್ಲಾ, ಕಾಂಗ್ರೆಸ್ -ಬಿಜೆಪಿ ಗಿಂತ ಹೆಚ್ಚು ಸ್ಥಾನಗಳನ್ನ ಜೆಡಿಎಸ್ ಪಡೆದುಕೊಳ್ಳಲಿದೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಹೆಚ್.ಡಿ.ಕೆ. ಆಶಾಯ ವ್ಯಕ್ತಪಡಿಸಿದ್ರು.