Select Your Language

Notifications

webdunia
webdunia
webdunia
webdunia

ನಿರ್ಜನ ಪ್ರದೇಶಕ್ಕೆ ಹೋಗಬಾರದು: ಆನಂದ್ ಸಿಂಗ್ ಅವಿವೇಕದ ಮಾತು

anand singh
bengaluru , ಗುರುವಾರ, 26 ಆಗಸ್ಟ್ 2021 (19:30 IST)

ರಾಜ್ಯದಲ್ಲಿ ಗುಡ್ಡ ಬೆಟ್ಟ ಕಾಡು ಪ್ರದೇಶ ಹೆಚ್ಚಾಗಿದೆ. ಕಪಲ್ಸ್ (ಜೋಡಿಗಳು) ಇಂತಹ ನಿರ್ಜನ ಪ್ರದೇಶ ಪ್ರದೇಶಕ್ಕೆ ಹೋಗಬಾರದು ಎಂದು ಹೇಳುವ ಮೂಲಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಮೈಸೂರಿನಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರವಾಗಿ ಇಂದು ಖನಿಜ ಭವನದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಇಂತಹ ನೀಚ ಕೃತ್ಯಗಳನ್ನು ಯಾರೇ ಎಷ್ಟೇ ದೊಡ್ಡವರು ಮಾಡಿದ್ದರು ಅದು ತಪ್ಪೇ. ಇಂತಹ ಘಟನೆಗಳು ಬಹಳಷ್ಟು ಬೆಳಕಿಗೆ ಬರುವುದಿಲ್ಲ ಎಂದರು.
 

ನಮ್ಮದು ಹಂಪಿ‌ ಪ್ರವಾಸಿ ತಾಣವೇ ಆಗಿದ್ದು, ರಿಮೋಟ್ ಏರಿಯಾದಲ್ಲಿ ಆಗಾಗ ಕಪಲ್ಸ್ ಬರ್ತಾನೇ ಇರ್ತಾರೆ. ಅವರಿಗೆ ಗೊತ್ತಿರಲಿಲ್ಲ, ಇಂತಹ ಅನಾಹುತಕ್ಕೆ ಸಿಕ್ತೇವೆ ಅಂತ. ಕೆಲವು ಗುಂಪುಗಳು ಇದನ್ನ‌ ವಾಚ್ ಮಾಡ್ತಿರ್ತಾರೆ. ಬ್ಲಾಕ್ ಮೇಲೆ ಮಾಡಿ ಹಣ ವಸೂಲಿ ಮಾಡ್ತಾರೆ ನಮ್ಮಲ್ಲಿ ಗುಡ್ಡ ಕಾಡು ಹೆಚ್ಚಾಗಿದ್ದರಿಂದ ಕಪಲ್ಸ್ ಗಳು ಇಂತಹ ಸ್ಥಳಕ್ಕೆ‌ಹೋಗಬಾರದು. ಅಂತಹ ಸ್ಥಳಗಳಲ್ಲಿ ಅವೇರ್ನೆಸ್ ಮೂಡಿಸುವ ಕೆಲಸ ಮಾಡಬೇಕೆ ಹೊರತು ಪೊಲೀಸರನ್ನ‌ ಇಟ್ಟು ಕಾವಲು ಕಾಯಿಸೋಕೆ ಆಗಲ್ಲ. ಜನರಲ್ಲಿ ನಾವು ಜಾಗೃತಿ ಮೂಡಿಸಬೇಕು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕು. ನಮ್ಮ‌ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಹೇಳಿಕೆ ವಾಪಸ್ ಪಡೆಯುತ್ತೇನೆ: ಅರಗ ಜ್ಞಾನೇಂದ್ರ ಸ್ಙಷ್ಟನೆ