Select Your Language

Notifications

webdunia
webdunia
webdunia
webdunia

ಮೈಸೂರು ಗ್ಯಾಂಗ್ ರೇಪಿಸ್ಟ್ ಗಳಿಗೆ ಕಠಿಣ ಶಿಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು ಗ್ಯಾಂಗ್ ರೇಪಿಸ್ಟ್ ಗಳಿಗೆ ಕಠಿಣ ಶಿಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ
bengaluru , ಬುಧವಾರ, 25 ಆಗಸ್ಟ್ 2021 (19:00 IST)

ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಶೀಘ್ರವೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾ

ನೇಂದ್ರ ತಿಳಿಸಿದ್ದಾರೆ.

ಮೈಸೂರಲ್ಲಿ ಗ್ಯಾಂಗ್ ರೇಪ್ ಪ್ರಕರಣದ ವಿಚಾರವಾಗಿ ಇಂದು ವಿಕಾಸಸೌಧದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ಈಗಾಗಲೇ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನಾನು ನಾಳೆ ಸಂಜೆ ಮೈಸೂರಿಗೆ ಹೋದ ನಂತರ ಈ ಕೇಸ್ ಬಗ್ಗೆ ತುಂಬಾ ಸಿರಿಯಸ್ ಅಗಿ ಕ್ರಮ ತೆಗೆದುಕೊಳ್ಳಲು ಪೋಲಿಸರಿಗೆ ಹೇಳಿದ್ದೇನೆ. ಅದ್ರೆ ಇನ್ನು ಆರೋಪಿಗಳು ಬಂಧನವಾಗಿಲ್ಲ ಎಂದರು.

ಆರೋಪಿಗಳಿಗೆ ಕಠಿಣ ಶಿಕ್ಷೆ ಬೀಳುವಂತೆ ಮಾಡುತ್ತೇವೆ. ಮೈಸೂರು ಶಾಂತಿ ನಗರವಾಗಿದ್ದರಿಂದ ಅಂತಹ ಮೈಸೂರಲ್ಲಿ ಆಗಿರುವುದು ನನಗೆ ತುಂಬಾ ನೋವು ಆಗಿದೆ. ನಿನ್ನೆ ಹೆಲಿಪ್ಯಾಡ್ ಹತ್ತಿರ ಹೋದಾಗ ಯಾರೋ ಹಿಂಬಾಲಿಸಿ ಈ ಕೆಲಸ ಮಾಡಿದ್ದಾರೆ. ಇದನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಾನು ನಾಳೆ ಮೈಸೂರಲ್ಲಿ ಅಧಿಕಾರಗಳನ್ನು ಭೇಟಿಯಾಗಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇನೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಕುಸಿತ: 1224 ಪಾಸಿಟಿವ್ ದೃಢ; 22 ಮಂದಿ ಸೋಂಕಿಗೆ ಬಲಿ