Select Your Language

Notifications

webdunia
webdunia
webdunia
webdunia

ಬಸ್, ಮೆಟ್ರೊ, ನೀರು ಬಳಿಕ ನಂದಿನಿ ಹಾಲಿನ ದರವೂ ಏರಿಕೆ: ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಒಂದೇ ಬಾಕಿ

Nandini Milk

Krishnaveni K

ಬೆಂಗಳೂರು , ಬುಧವಾರ, 19 ಫೆಬ್ರವರಿ 2025 (12:29 IST)
ಬೆಂಗಳೂರು: ರಾಜ್ಯದ ಜನತೆಗೆ ಒಂದಾದ ಮೇಲೊಂದರಂತೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಬಸ್, ಮೆಟ್ರೊ, ನೀರು ಬಳಿಕ ಈಗ ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಸುದ್ದಿಯಾಗಿದೆ. ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಒಂದೇ ಬಾಕಿ ಎನ್ನಲಾಗಿದೆ.

ನಂದಿನಿ ಹಾಲಿನ ದರವನ್ನು 5 ರೂ.ಗಳಷ್ಟು ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಈಗ ಸಿಎಂ ಅಂಕಿತ ಬೀಳುವುದಷ್ಟೇ ಬಾಕಿ ಎನ್ನಲಾಗಿದೆ. ಸಿಎಂ ಒಪ್ಪಿಗೆ ಕೊಟ್ಟರೆ ಹಾಲು ಕೂಡಾ ದುಬಾರಿಯಾಗಲಿದೆ.

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗಕ್ಕೆ ಹಾಲು ಮತ್ತೊಂದು ಹೊರೆಯಾಗಲಿದೆ. ಹಾಲು ದಿನನಿತ್ಯದ ಅಗತ್ಯ ವಸ್ತುವಾಗಿದೆ. ಹೀಗಾಗಿ ಇದನ್ನು ಖರೀದಸದೇ ಕೂರುವಂತೆಯೂ ಇಲ್ಲ.

ಈಗಾಗಲೇ ರಾಜ್ಯ ಸರ್ಕಾರ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸರ್ಕಾರೀ ಸ್ವಾಮ್ಯದ ಬಸ್ ಟಿಕೆಟ್ ದರವನ್ನು ಶೇ.15 ರಷ್ಟು ಏರಿಕೆ ಮಾಡಿದೆ. ಮೆಟ್ರೊ ಪ್ರಯಾಣ ದರವೂ ಕಳೆದ ವಾರ ಏರಿಕೆಯಾಗಿದೆ. ಕಾವೇರಿ ನೀರಿನ ದರ ಏರಿಕೆ ಬಗ್ಗೆ ಈ ವಾರದ ಅಂತ್ಯಕ್ಕೆ ತೀರ್ಮಾನವಾಗಲಿದೆ. ಮುಂದಿನ ತಿಂಗಳಿನಿಂದ ವಿದ್ಯುತ್ ಕೂಡಾ ದುಬಾರಿಯಾಗಲಿದೆ.

ಇದರ ನಡುವೆ ಈಗ ಹಾಲಿನ ದರ ಏರಿಕೆ ಸುದ್ದಿ ಬಂದಿದೆ.ಕೆಎಂಎಫ್ ಕಳೆದ ಡಿಸೆಂಬರ್ ನಲ್ಲೇ ಸರ್ಕಾರಕ್ಕೆ ಹಾಲಿನ ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ದರ ಏರಿಕೆ ಅನಿವಾರ್ಯ ಎಂದಿತ್ತು. ಹೀಗಾಗಿ ಈ ಬಾರಿ ಸಿಎಂ ಹಾಲು ದರ ಏರಿಕೆಗೆ ಸಮ್ಮತಿ ನೀಡಬಹುದು ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಮನೆಗೆ ಬೆಂಕಿ, ತಪ್ಪಿಸಿಕೊಳ್ಳಲು ಮಹಡಿಯಿಂದ ಹಾರುತ್ತಿರುವ ಜನ ವಿಡಿಯೋ ವೈರಲ್