Publish Date: Wed, 04 Jan 2023 (18:23 IST)
Updated Date: Wed, 04 Jan 2023 (18:26 IST)
ಡ್ರಗ್ಸ್ ಹೊಂದಿದ್ದ ಆರೋಪದಡಿ ಟಾಲಿವುಡ್ನ ಖ್ಯಾತ ನಟಿ ನೇಹಾ ದೇಶ್ಪಾಂಡೆ ಅವರ ಪತಿ ಮೋಹಿತ್ ಅಗರ್ವಾಲ್ ಅಲಿಯಾಸ್ ಮೈರಾನ್ ಮೋಹಿತ್ ಅವರನ್ನು ಬಂಧಿಸಲಾಗಿದೆ. ಹೈದರಾಬಾದ್ ನಾರ್ಕೋಟಿಕ್ಸ್ ಎನ್ಪೋರ್ಸ್ಮೆಂಟ್ ವಿಂಗ್ ಇವರನ್ನು ಬಂಧಿಸಿದೆ. ಮೋಹಿತ್ ಜೊತೆಗೆ ಹೈದರಾಬಾದ್ನ ಖ್ಯಾತ ಉದ್ಯಮಿ ಮನ್ಯಾಮ್ ಕಿಶೋರ್ ರೆಡ್ಡಿ ಎಂಬುವವರನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ 2 ಗ್ರಾಂ ಕೊಕೇನ್ ಇದ್ದಿದ್ದಕ್ಕೆ ಇಬ್ಬರ ಬಂಧನವಾಗಿದೆ. ಆರೋಪಿ ಮೋಹಿತ್ ದಿ ಅನ್ಸ್ಕ್ರಿಪ್ಟೆಡ್ ಎಂಬ ಇವೆಂಟ್ ಮ್ಯಾನೇಜ್ಮೆಂಟ್ ಎಂಬ ಕಂಪೆನಿಯನ್ನು ಹೊಂದಿದ್ದಾರೆ.