ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ ಸಿ ಎಂ ಉದಾಸಿ ಪರ ನಟ ಯಶ್ ಮತಯಾಚನೆ ಮಾಡಿದ್ದಾರೆ.
ನಾನು ವ್ಯಕ್ತಿ ನೋಡಿ ಬಂದಿದೆನಿ ಪಕ್ಷ ನೋಡಿ ಬಂದಿಲ್ಲಾ. ಸಿ ಎಂ ಉದಾಸಿ ನನಗೆ ಮನೆಯವರ ಸಮಾನ ಬೆಂಗಳೂರಿಗೆ ಬಂದರೆ ಇಡ್ಲಿ ಸಾಂಬಾರ್ ಕೊಡಿಸ್ತೇನಿ
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಿಸಿದಾರೆ. ಇವರ ಗುಣ ನೋಡಿ ಇವರ ಪರ ಪ್ರಚಾರಕ್ಕೆ ಬಂದಿದೆನಿ. ನನ್ನ ಅಭಿಮಾನಿಗಳಲ್ಲಿ ಕೇಳೊದೊಂದೆ ಇವರನ್ನು ಬೆಂಬಲಿಸಿ. ನಾನು ವಿನಯ ಕುಲಕರ್ಣಿ, ಎಂ ಬಿ ಪಾಟೀಲ್ ಪರ ಮತಯಾಚನೆ ಮಾಡಲಿದ್ದೆನೆ
ರೈತರಿಗಾಗಿ ಕೆಲ ಯೋಜನೆಗಳಿಗೆ ಉದಾಸಿ ಬೆಂಬಲ ನೀಡಿದ್ದಾರೆ. ಅದಕ್ಕೆ ಒಳ್ಳೆಯ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ನಟ ಯಶ್ ತಿಳಿಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!