Select Your Language

Notifications

webdunia
webdunia
webdunia
webdunia

ಗೆಳೆಯನಿಗೆ ಪಾಠ ಕಲಿಸಲು ಹೋಗಿ ಜೈಲು ಸೇರಿದ ಯುವತಿ

ಗೆಳೆಯನಿಗೆ ಪಾಠ ಕಲಿಸಲು ಹೋಗಿ ಜೈಲು ಸೇರಿದ ಯುವತಿ
ಜಾಮ್‍ ನಗರ , ಬುಧವಾರ, 1 ನವೆಂಬರ್ 2023 (20:32 IST)
ಜಾಮ್‍ನಗರ ಐಟಿಐ ವಿದ್ಯಾರ್ಥಿನಿ ಶಿಲ್ಪಾ ವಘೇಲ ಈ ಕೃತ್ಯ ಎಸಗಿದ ವಿದ್ಯಾರ್ಥಿಯಾಗಿದ್ದು, ಈಕೆ ಮೂರು ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಕೂಡ ಆಗಿದ್ದಳು. ಆದರೆ ಆತ ಆಕೆಗೆ ಅಂದು ಗರ್ಭಪಾತ ಮಾಡಿಕೊಳ್ಳಲು ಹೇಳಿದ್ದಾನೆ.
 
ಬಾಯ್ ಫ್ರೆಂಡ್ ಮದುವೆಯಾಗಲು ನಿರಾಕರಿಸಿದ್ದಕ್ಕೆ ನವಜಾತ ಶಿಶುವನ್ನು ಅಪಹರಿಸಿದ ಆತನಿಗೆ ಬ್ಲಾಕ್ ಮೇಲ್ ಮಾಡಲು ಮುಂದಾದ ವಿದ್ಯಾರ್ಥಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
 
ಆದರೆ ಇತ್ತೀಚೆಗೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಪ್ರಿಯಕರನಿಗೆ ಒತ್ತಾಯಿಸುತ್ತಿದ್ದರೂ ಆತ ಮಾತ್ರ ನಿರಾಕರಿಸುತ್ತಿದ್ದ. ಇದರಿಂದ ಬೇಸತ್ತ ಶಿಲ್ಪಾ ಪ್ರಿಯಕರನಿಗೆ ನನಗೆ ಮಗುವಾಗಿದೆ ಎಂದು ಬ್ಲಾಕ್ ಮೇಲ್ ಮಾಡಲು ಜಾಮ್‍ ನಗರದ ಜಿಜಿ ಆಸ್ಪತ್ರೆಗೆ ನರ್ಸ್ ಥರ ಉಡುಗೆ ಧರಿಸಿ ಹೋಗಿ ನವಜಾತ ಶಿಶುವನ್ನು ಅಪಹರಿಸಿದ್ದಾಳೆ. ಇತ್ತ ಮಗುವಿನ ಮನೆಯವರು ಮಗು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
 
ನಂತರ ಶಿಲ್ಪಾ ಕೊಡಿಯಾರ್ ಮಠ್ ಹತ್ತಿರ ಯಾರೋ ಮಗುವನ್ನು ಬಿಟ್ಟುಹೋಗಿದ್ದರು ಎಂದು ಹೇಳಿ ಪೊಲೀಸರಿಗೆ ಮಗುವನ್ನು ನೀಡಿದ್ದಳು. ಪೊಲೀಸರು ಅನುಮಾನದಿಂದ ಆಕೆಯ ಮೇಲೆ ನಿಗಾ ಇಟ್ಟಾಗ ಆಕೆಯೇ ಮಗುವನ್ನು ಅಪಹರಣ ಮಾಡಿರುವ ವಿಚಾರ ತಿಳಿದುಬಂದಿದೆ. ಇದೀಗ ಶಿಲ್ಪಾ ನನ್ನು ಬಂಧಿಸಿದ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್‌ ಸಿಎಂ ಪುತ್ರನ ಭೇಟಿಯಾದ ಪ್ರಧಾನಿ ಮೋದಿ