Publish Date: Wed, 01 Nov 2023 (10:27 IST)
Updated Date: Wed, 01 Nov 2023 (10:28 IST)
ಜರ್ಮನಿ ಪೊಲೀಸ್ ಅಧಿಕಾರಿಯೊರ್ವ ನಿಗೆ ಯುವತಿ ಕಾಂಡೋಮ್ ಬಳಕೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದಳು. ಆದರೆ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟಿದ್ದಾನೆ. ಈ ವಿಚಾರ ತಿಳಿದು ಕೋಪಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟಿದ್ದಕ್ಕೆ ಪೊಲೀಸ್ ಅಧಿಕಾರಿಯೊರ್ವ ಜೈಲು ಶಿಕ್ಷೆಗೆ ಒಳಗಾದ ಘಟನೆ ಜರ್ಮನಿಯಲ್ಲಿ ನಡೆದಿದೆ.
ರೇಪ್ ಹಾಗೂ ಲೈಂಗಿಕ ಕಿರುಕುಳ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದೆ. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ 8 ತಿಂಗಳು ಜೈಲು ಶಿಕ್ಷೆ ಹಾಗೂ 3 ಸಾವಿರ ಯುರೋ(ಅಂದಾಜು 2.39 ಲಕ್ಷ ರೂ.) ದಂಡವನ್ನು ವಿಧಿಸಿದೆ. ಅಲ್ಲದೇ 96 ಯುರೋಗಳನ್ನು(ಅಂದಾಜು 7500 ರೂ.)ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.