Daily Horoscope

Select Your Language

Notifications

webdunia
webdunia
webdunia
webdunia

ವಿಧಾನಸೌಧದ ಮುಂದೆಯೇ ಆತ್ಮಹತ್ಯೆಗೆ ಯತ್ನಸಿದ ಮಹಿಳೆ!

ವಿಧಾನಸೌಧ
ಬೆಂಗಳೂರು :  ವಿಕಾಸಸೌಧದ  ಮುಂದೆ ಮುಸ್ಲಿಂ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ  ಮಧ್ಯಾಹ್ನ ನಡದಿದೆ. ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಳ್ಳಲು ಯತ್ನಿಸಿದ ಮಹಿಳೆಯನ್ನು ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ರಕ್ಷಿಸಿ ಬಳಿಕ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. 
 
ಶಾಹಿಸ್ತಾ ಬೇಗಂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ತಮ್ಮ ಕುಟುಂಬ ಸಮೇತ ವಿಕಾಸಸೌಧದ ಬಳಿ ಆಗಮಿಸಿ ತಮ್ಮ ಕುಂದುಕೊರತೆ ಅಹವಾಲು ಆಲಿಸುವಂತೆ ಏಕಾಏಕಿ ಪ್ರತಿಭಟನೆಗೆ ಮುಂದಾಗಿದ್ದರು. ಬ್ಯಾಂಕಿನಿಂದ ಸಾಲ ಪಡೆದಿರುವ ನಮಗೆ ಬ್ಯಾಂಕ್‌ ವಂಚಿಸಿದೆ ಎಂದು ಶಾಹಿಸ್ತಾ ಬೇಗಂ ದಂಪತಿಗಳು ಅಳಲು ತೋಡಿಕೊಂಡಿದ್ದು, ತಮಗೆ ನ್ಯಾಯ ಕೊಡುವಂತೆ ಒತ್ತಾಯಿಸಿದ್ದಾರೆ. 

ಶಾಹಿಸ್ತಾ ಬೇಗಂ ಮತ್ತು ಅವರು ಕುಟುಂಬದ ಸದಸ್ಯರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದಿರುವ ವಿಧಾನಸೌಧ ಠಾಣೆಯ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ‌ಎಐಟಿಯುಸಿ ಕಾರ್ಯಕರ್ತೆಯರಿಂದ ಅಂಚೆ ಚಳುವಳಿ