BMTC ಬಸ್ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಸಹಜ ಸಾವಲ್ಲ ಆತ್ಮಹತ್ಯೆ ಎಂಬುದಕ್ಕೆ ಕೆಲ ಸಾಕ್ಷ್ಯಗಳು ದೊರೆತಿವೆ. ಆದರೆ ನಿಖರವಾಗಿ ಆತ್ಮಹತ್ಯೆ ಎಂದು ಸಾಬೀತಾಗಿಲ್ಲ. ಬೆಂಗಳೂರಿನಲ್ಲಿ BMTC ಕಂಡಕ್ಟರ್ ಮುತ್ತಯ್ಯ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ಬಸ್ ಬೆಂಕಿಗಾಹುತಿಯಾಗಿದ್ದು, ಮುತ್ತಯ ಸಜೀವ ದಹನಗೊಂಡಿದ್ರು. ಇವರು ಬಸ್ ನಿಲ್ಲಿಸಿದ ಬಳಿಕ ಹೊರಗೆ ಹೋಗಿ ಬಂದಿದ್ದಾರೆ.. ಮುತ್ತಯ UPI ಬಳಸಿ ಹತ್ತಿರ ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಿದ್ದಾರೆ. 700 ರೂವನ್ನು ತನ್ನ UPI ಬಳಸಿ ಪೆಟ್ರೋಲ್, ಡೀಸೆಲ್ ಖರೀದಿಸಿದ್ದಾರೆ. ಬಳಿಕ ಬಸ್ ನಿಲ್ದಾಣಕ್ಕೆ ಬಂದು ಡ್ರೈವರ್ ಪ್ರಕಾಶ್ನನ್ನು ಬಸ್ನಿಂದ ಹೊರಗೆ ಮಲಗುವಂತೆ ಸೂಚಿಸಿದ್ದಾರೆ. ಬಸ್ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಲಾಗಿದೆ. ಬಳಿಕ ಇವರು ಬಸ್ನ ಒಳಗೆ ಮಲಗಿ ನಿದ್ರಿಸಿದ್ದಾರೆ. ಇವೆಲ್ಲಾ ಅಂಶಗಳನ್ನು ಪರಿಗಣಿಸಿದಾಗ ಇದು ಸಹಜ ಸಾವಲ್ಲ ಪೆಟ್ರೋಲ್, ಡೀಸೆಲ್ ಬಳಸಿ ಬಸ್ಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರ ಎಂದು ಶಂಕಿಸಲಾಗಿದೆ. ಸದ್ಯ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, FSL ರಿಪೋರ್ಟ್ ಬಂದ ಬಳಿಕ ಬೆಂಕಿ ಹತ್ತಿಕೊಂಡಿದ್ದು ಹೇಗೆ ಎಂದು ತಿಳಿಯಬೇಕಿದೆ. ಕಂಡಕ್ಟರ್ ಮುತ್ತ ಹಣಕಾಸು ತೊಂದರೆಗೆ ಸಿಲುಕಿದ್ರು ಎಂದು ಹೇಳಲಾಗಿದೆ.