Select Your Language

Notifications

webdunia
webdunia
webdunia
webdunia

ಬೆಂಕಿ ಅವಘಡ: ಮಲಗಿದ್ದಲ್ಲೇ ಕಂಡಕ್ಟರ್ ಸಜೀವ ದಹನ!

ಬೆಂಕಿ ಅವಘಡ: ಮಲಗಿದ್ದಲ್ಲೇ ಕಂಡಕ್ಟರ್ ಸಜೀವ ದಹನ!
ಬೆಂಗಳೂರು , ಶುಕ್ರವಾರ, 10 ಮಾರ್ಚ್ 2023 (09:39 IST)
ಬೆಂಗಳೂರು : ನಿಂತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ನಿರ್ವಾಹಕ ಸಜೀವ ದಹನವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
 
ಮೃತ ದುರ್ದೈವಿಯನ್ನು ಮುತ್ತಯ್ಯ ಸ್ವಾಮಿ (45) ಎಂದು ಗುರುತಿಸಲಾಗಿದೆ. ಬಸ್ ಡಿಪೋ 31ಕ್ಕೆ ಸೇರಿದ್ದಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. 

ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣದಲ್ಲಿ ಚಾಲಕ ಹಾಗೂ ನಿರ್ವಾಹಕ ಬಸ್ನಲ್ಲಿ ಮಲಗಿದ್ದರು. ಮುತ್ತಯ್ಯ ಸ್ವಾಮಿ ಅವರು ಬಸ್ಸಿನ ಸಿಟ್ನಲ್ಲಿಯೇ ಮಲಗಿದ್ದರು.

ಈ ವೇಳೆ ಬಸ್ಸಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು, ಮುತ್ತಯ್ಯ ಅವರು ಮಲಗಿದ್ದಲ್ಲೇ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಇತ್ತ ಮುಂಜಾನೆ ಚಾಲಕ ಎದ್ದು ಶೌಚಕ್ಕೆ ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಸತಿ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ !