ಸಿಟಿ ಜನರ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.ನಗರದ ಎಲ್ಲ ಮೂಲಗಳಿಗೂ ಜನರನ್ನು ತಲುಪಿಸುತ್ತದೆ.ಬಿಎಂಟಿಸಿಯಲ್ಲಿ ನಿತ್ಯ ಲಕ್ಷಾಂತರ ಜನರು ಸುರಕ್ಷಿತವಾಗಿ ಸಂಚಾರ ಮಾಡ್ತಿದ್ದಾರೆ.ಆರಾಮದಾಯಕ ಪ್ರಯಾಣಕ್ಕೆ ಬಸ್ಗಳು ಅನುಕೂಲವಾಗಿದೆ.
ಬಿಎಂಟಿಸಿ ಹೊಸ ಹೊಸ ಬಸ್ಗಳನ್ನು ಪರಿಚಯಿಸುತ್ತಿದೆ.ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್, ಎಂಡಿ 15 ಬಸ್ ಹೀಗೆ ಹೊಸ ಹೊಸ ಬಸ್ಗಳನ್ನು ರಸ್ತೆಗೆ ಇಳಿಸುತ್ತದೆ.ಎಲೆಕ್ಟ್ರಿಕ್ ಬಸ್ನಲ್ಲಿ ವಿಕಲಚೇತನರು ವೀಲ್ಚೇರ್ ಸಮೇತ ಬಸ್ ಹತ್ತಲು ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್ಫಾರಂ ಸೌಲಭ್ಯ ಇದೆ.ವಿಕಲಚೇತನ ವಿದೇಶಿ ಪ್ರಜೆಯೊಬ್ಬರು ವೀಲ್ ಚೇರ್ ಸಮೇತ ಬಸ್ ಹತ್ತಿದ್ದು,ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್ಫಾರಂ ಸೌಲಭ್ಯ ಕಂಡು ಆ ಪ್ರಜೆ ಕಂಡೆಕ್ಟ್ರಗೆ ಕೈ ಮುಗಿದಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.