Publish Date: Wed, 22 Mar 2023 (17:22 IST)
Updated Date: Wed, 22 Mar 2023 (17:26 IST)
ಬೇವು-ಬೆಲ್ಲದ ಹಬ್ಬಕ್ಕೆ ಸಿಲಿಕಾನ್ ಸಿಟಿ ಜನರು ಸಜ್ಜಾಗುತ್ತಿದ್ರೆ, ಇತ್ತ ಹೊಸತಡುಕಿಗೂ ಮೊದಲೇ ಬಾಯ್ಕಾಟ್ ಹಲಾಲ್ ಅಭಿಯಾನ ಸದ್ದುಮಾಡ್ತಿದೆ.ಹಲಾಲ್ ಕಟ್ ಮಾಂಸಕ್ಕೆ ಸೆಡ್ಡು ಹೊಡೆಯಲು ಸಜ್ಜಾದ ಹಿಂದೂ ಸಂಘಟನೆಗಳು, ಹಲಾಲ್ ವಿರುದ್ಧ ಜಾಗೃತಿ ಅಭಿಯಾನ ಆರಂಭಿಸಿವೆ.
ಯುಗದ ಮೊದಲ ಹಬ್ಬ ಯುಗಾದಿಗೆ ಈ ಬಾರಿಯೂ ಧರ್ಮದಂಗಲ್ ಬಿಸಿ ತಟ್ಟುವ ಸಾಧ್ಯತೆಗಳು ಕಂಡುಬರ್ತಿದೆ. ಈ ಬಾರಿ ಹೊಸತಡುಕಿಗೆ ಹಲಾಲ್ ಮಾಂಸ ಖರೀದಿಸದಂತೆ ಹಿಂದೂಪರ ಸಂಘಟನೆಗಳು ಕ್ಯಾಂಪೇನ್ ಆರಂಭಿಸಿದೆ. ಬೆಂಗಳೂರಲ್ಲಿ ಬಾಯ್ಕಾಟ್ ಹಲಾಲ್ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಚಾಲನೆ ನೀಡಿವೆ.ಹಲಾಲ್ ಉತ್ಪನ್ನಗಳನ್ನ ಖರೀದಿಸಬೇಡಿ ಬದಲಾಗಿ ಜಟ್ಕಾ ಕಟ್ ಮಾಂಸ ಬಳಸಿ ಅಂತಾ ಕರಪತ್ರ ಹಂಚುವ ಮೂಲಕ ಜನರಿಗೆ ಅರಿವು ಮೂಡಿಸಿವೆ.ತ್ತ ಯುಗಾದಿಯ ಮರುದಿನ ಸಾಕಷ್ಟು ಜನರು ಮಟನ್,ಚಿಕನ್ ಖರೀದಿಗೆ ಮುಂದಾಗುತ್ತಾರೆ, ಈ ವೇಳೆ ಹಲಾಲ್ ಕಟ್ ಮಾಂಸ ಖರೀದಿಗೆ ಕಡಿವಾಣ ಹಾಕಬೇಕು ಅಂತಾ ಹಿಂದೂಪರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಿದೆ.