Select Your Language

Notifications

webdunia
webdunia
webdunia
webdunia

ಪತಿಯನ್ನು ಬಿಟ್ಟು ,‌ಬೇರೊಬ್ಬನೊಂದಿಗೆ ಓಡಿ ಬಂದಿದ್ದ ಪತ್ನಿ ..!

The wife had left her husband and ran away with someone else
bangalore , ಬುಧವಾರ, 22 ಮಾರ್ಚ್ 2023 (14:25 IST)
ಕೌಟುಂಬಿಕ ಕಲಹಗಳು ನೆತ್ತರು ಹರಿಸುವಷ್ಟರ ಮಟ್ಟಿಗೆ ತೀವ್ರತೆಯನ್ನ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ . ಪತ್ನಿ ಮಾಡಿದ್ದ ತಪ್ಪಿಗೆ ಅಷ್ಟೂ ದಿನ ಮಾನಸಿಕವಾಗಿ ಕುಗ್ಗಿದ್ದವನು ಕೊನೆಗೆ ಅದೊಂದು ನಿರ್ಧಾರಕ್ಕೆ ಬಂದು ಬಿಟ್ಟಿದ್ದ.. ಅದು ಪತ್ನಿಯ ಸಾವು.ತಬಸ್ಸುಮ್ ಬೇಬಿ  ಎಂಬಾಕೆಯನ್ನ ನೆನ್ನೆ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ನೆನ್ನೆ ತಬಸ್ಸುಮ್ ಬೇಬಿಯ ಮೊದಲ ಪತಿ ಶೇಕ್ ಸೊಹೇಲ್ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆಯಲ್ಲಿ ತಬಸ್ಸುಮ್ ಳ ಮಗು ಹತ್ಯೆಗೂ ಕೂಡ ಹಂತಕ ಪತಿ ಮುಂದಾಗಿದ್ದ. ಇವೆಲ್ಲಾವೂ ನಡೆದಿದ್ದು ತಬಸ್ಸುಮ್ ಳ ಸಹೋದರಿಯೆ ಮುಂದೇಯೇ

ಹದಿನಾಲ್ಕು ವರ್ಷದ ಹಿಂದೆ ಕೊಲ್ಕೊತ್ತಾದಲ್ಲಿ  ತಬಸ್ಸುಮ್ ಹಾಗು ಶೇಕ್ ಸೊಹೇಲ್ ಮದ್ವೆಯಾಗಿತ್ತು. ಕೆಲಸ ಅರಸಿ ಬೆಂಗಳೂರಿಗೆ ಬಂದು ನೆಲಸಿದ್ದರು . ಈ ವೇಳೆ ತಬಸ್ಸುಮ್ ಗೆ ಪರಿಚಯವಾದವನೇ ನಯೀಂ,  ತಬಸ್ಸುಮ್ ,ನಯಿಂ  ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆ ಪತಿ ಶೇಕ್ ಸೊಹೇಲ್ ಹಾಗು ತಬಸ್ಸುಮ್ ನಡುವೆ ರಂಪಾಟವೇ ನಡೆದಿತ್ತು.  ಆದರೂ ತಬಸ್ಸುಮ್ ,ನಯಿಂನ ಜೊತೆ ಸಂಬಂಧ ಮುಂದುವರೆಸಿದ್ದಳು. ಇದು ಸರಿ ಹೋಗೊಲ್ಲ ಎಂದು ಶೇಕ್ ಸುಹೇಲ್ ಪತ್ನಿಯನ್ನ ಕೊಲ್ಕೊತ್ತಾಗೆ ಕರೆದೊಯ್ದಿದ್ದ‌ .  ತನ್ನ ಅನೈತಿಕತೆಗೆ ಗಂಡ ಅಡ್ಡಿ ಎಂಬ ಕಾರಣಕ್ಕೆ ಆರು ವರ್ಷಗಳ ಹಿಂದೆ ಪ್ರಿಯಕರನ ಜೊತೆ ಇರಲು ಮತ್ತೆ ಬೆಂಗಳೂರಿಗೆ ಓಡಿ ಬಂದು ವಿವಾಹವಾಗಿದ್ದಳು. ಇಬ್ಬರಿಗೆ ಒಂದು ಮಗು ಕೂಡ ಇತ್ತು. ಪತ್ನಿಯನ್ನ ಕಳೆದುಕೊಂಡಿದ್ದ ಶೇಕ್ ಸೊಹೇಲ್ ಕಳೆದ ಆರು ವರ್ಷದವರೆಗು ಮಾನಸಿಕವಾಗಿ ಬಳಲುತ್ತಿದ್ದ‌. ನೋವಿನಿಂದ ಕುಡಿತದ ಚಟಕ್ಕೆ ಬಿದ್ದಿದ್ದ . ಇತ್ತ ತಬಸ್ಸುಮ್ ,ನಯಿಂ ಜೊತೆ ಸುಖವಾಗಿ ಬಾಳುತ್ತಿದ್ದಳು. ತನ್ನ ಬಾಳನ್ನು ಹದಗೆಡಿಸಿದ್ದು ಬೇರೆಯವನ ಜೊತೆ ನೆಮ್ಮದಿಯಾಗಿದ್ದಾಳೆಂದು ಖುದ್ದು ಹೋಗಿದ್ದ ಸೊಹೇಲ್ ,ಆಕೆಯನ್ನ ಕೊಲ್ಲುವ ನಿರ್ಧಾರಕ್ಕೆ ಬಂದಿದ್ದ. ನಂತರ ನಗರಕ್ಕೆ ಬಂದವನು ತಬಸ್ಸುಮ್ ಳ ಸಹೋದರಿಗೆ ಕರೆ ಮಾಡಿ ತಬಸ್ಸುಮ್ ಜೊತೆ ಮಾತನಾಡಬೇಕು ಎಂದು ತಬಸ್ಸುಮ್ ಸಹೋದರಿಯ ಮನೆಗೆ ಕರೆಸಿಕೊಂಡಿದ್ದ.‌ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದವನೇ ಮತ್ತೆ ಪತ್ನಿಯ ಜೊತ ಕಿರಿಕ್ ಮಾಡಿದ್ದ ನಂತರ ಮದ್ಯದ ನಶೆಯಲ್ಲಿ ನೇರವಾಗಿ ಕುತ್ತಿಗೆಗೆ ಚಾಕು ಹಾಕಿ ಮಗುವಿನ ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದ ಇದರಿಂದ ಗಾಬರಿಯಾದ ತಬಸ್ಸುಮ್ ಳ ತಂಗಿ ಕಿರುಚುತ್ತಾ ಹೊರ ಬಂದು ಮನೆ ಬಾಗಿಲನ್ನ ಹೊರ ಭಾಗದಲ್ಲಿ ಲಾಕ್ ಮಾಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಳು 

ಸದ್ಯ ಪತಿ ಶೇಕ್ ಸೊಹೇಲ್ ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ. ಈ ಸಂಬಂಧ ತಬಸ್ಸುಮ್ ತಂಗಿ ಪ್ರತ್ಯಕ್ಷ ಸಾಕ್ಷಿಯಾದ ಕಾರಣ ಆಕೆಯ ಹೇಳಿಕೆಯನ್ನೂ ಪಡೆಯಲಾಗುತ್ತಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಯಲ್ಲಿ ಜನರ ಖರೀದಿ ಭರಾಟೆ ಜೋರು