Select Your Language

Notifications

webdunia
webdunia
webdunia
webdunia

ಉರಿಗೌಡ, ನಂಜೇಗೌಡ ಡೆವಲಪ್ಮೆಂಟ್ ಬಗ್ಗೆ ಪೋಸ್ಟ್ ಮಾಡಿ ಅರೆಸ್ಟ್ ಆದ ನಟ ಚೇತನ್..!

Actor Chetan arrested for posting about Urigowda
bangalore , ಮಂಗಳವಾರ, 21 ಮಾರ್ಚ್ 2023 (20:32 IST)
ಆ ದಿನಗಳು ಖ್ಯಾತಿಯ ನಟ ಚೇತನ್  ಎಷ್ಟು ಮಾತಾಡ್ತಾರೋ ಗೋತ್ತಿಲ್ಲ.. ಸೋಷಿಯಲ್ ಮೀಡಿಯಾ ಮೂಲಕ‌ ಮಾತ್ರ ಆಗಾಗ ಜೋರಾಗೇ ಮಾತಾಡ್ತಿರ್ತಾತೆ.. ಅವ್ರ ಕೆಲ ಪೋಸ್ಟ್ ಗಳು ಕೋರ್ಟ್ ನಲ್ಲಿ ವಾದ ಮಾಡೋವರ್ಗೂ ಬಿಡೋದಿಲ್ಲ‌..! ಡೆವಲಪ್ಮೆಂಟ್ ನೋಡಿ ಪೋಸ್ಟ್ ಮೂಲಕ ಸದ್ದು ಮಾಡೋ ನಟ ಚೇತನ್ ಈಗ ಉರಿಗೌಡ ಮತ್ತು ನಂಜೇಗೌಡ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಉರಿಗೌಡ ನಂಜೇಗೌಡರ ಬಗ್ಗೆ ಅದೆಷ್ಟು  ಚರ್ಚೆ ಆಗ್ತಿದೆ ಅಂತಾ ಎಲ್ರಿಗೂ ಗೊತ್ತಿದೆ.. ಬಿಜೆಪಿ ನಾಯಕರ ಉರಿಗೌಡ ನಂಜೇಗೌಡರ ಕಂಟೆಂಟ್ ನ ಸಿನಿಮಾ ರಾಜ್ಯ ರಾಜಕೀಯ ಟಾಕೀಸ್ ನಲ್ಲಿ ಹೌಸ್ ಫುಲ್‌ ಪ್ರದರ್ಶನ ಕಾಣ್ತಿದೆ..ಕಾಂತಾರ ಸಿನಿಮಾದ ಟಾಕ್ ತರಾನೇ ಉರಿಗೌಡ ನಂಜೇಗೌಡ ಟಾಕ್‌ ಶುರುವಾಗಿದೆ.. ಈ ಬಗ್ಗೆ ತಾನೂ ಪೋಸ್ಟ್ ಮೂಲಕ ಮಾತಾಡಿ ನಟ ಚೇತನ್ ಜೈಲು ಸೇರಿದ್ದಾರೆ.. ಹಿಂದುತ್ವ ಸುಳ್ಳಿನ ಆಧಾರದ ಮೇಲೆ ಕಟ್ಟಿದ್ದಾರೆ ಅನ್ನೋ ಹಿಂದೂ ವಿರೋಧಿ ವಿಚಾರ ಪೋಸ್ಟ್ ಮಾಡೋ ಮೂಲಕ ನ್ಯಾಯಾಂಗ ಬಂಧನ ಸೇರಿದ್ದಾರೆ.

ರಾಜ್ಯದಲ್ಲಿ‌ ಮೇಜರ್ ಡೆವಲಪ್ಮೆಂಟ್ ಆದಾಗ ನಟ ಚೇತನ್ ಏನ್ಮಾಡ್ತಾರೆ ಅಂತಾ ಎಲ್ರಿಗೂ ಗೊತ್ತೇ ಇದೆ.. ಅದ್ರಲ್ಲೂ ಹಿಂದೂ, ಮುಸ್ಲಿಂ ಚರ್ಚೆ ವಿಚಾರಗಳು ಬಂದಾಗ ಅವ್ರ ಟ್ವೀಟ್ ಹೇಗೆ ತಿರುವು ಪಡೆದುಕೊಳ್ಳುತ್ತೆ ಅಂತಾ ಗೊತ್ತೇ ಇದೆ.. ಅದ್ರಂತೆ ಉರಿಗೌಡ ನಂಜೇಗೌಡರ ಬಗ್ಗೆ ನಟ ಚೇತನ್ ಮಾಡಿರೋ ಪೋಸ್ಟ್ ಕೂಡ ಸಾಕಷ್ಟು ‌ವಿವಾದ ಸೃಷ್ಟಿಯಾಗಿದೆ.. ಈ ಬಗ್ಗೆ ಟ್ವೀಟ್ ಮಾಡಿದ್ದ ನಟ ಚೇತನ್ ಹಿಂದುತ್ವವನ್ನ ಸುಳ್ಳಿನ ಆಧಾರದ ಮೇಲೆ‌ ಕಟ್ಟಲಾಗಿದೆ ಅಂತಾ ಪೋಸ್ಟ್ ಮಾಡಿರೋ  ಚೇತನ್ ಸಾವರ್ಕರ್ ರಾಮ-ರಾವಣ ಹೇಳಿಕೆ, ಬಾಬರ್ ಮಸೀದಿ ಸುಳ್ಳು ಅಂತಾ ಉಲ್ಲೇಖಿಸಿ  ಉರಿಗೌಡ ನಂಜೇಗೌಡರು ಟಿಪ್ಪುವನ್ನ ಕೊಂದದ್ದೂ ಸುಳ್ಳು.. ಹಿಂದುತ್ವವನ್ನ ಸತ್ಯದಿಂದ ಮಾತ್ರ ಸೋಲಿಸ್ಬೋದು.. ಸತ್ಯವೇ ಸಮಾನತೆ ಅಂತಾ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.. ಇವ್ರ ಪೋಸ್ಟ್ ನೋಡಿ ಹಿಂದೂ ಮುಖಂಡರು ದೂರು ನೀಡಿದ್ದ ಬೆನ್ನಲ್ಲೇ  ಚೇತನ್ ನನ್ನ ಅರೆಸ್ಟ್ ಮಾಡಿದ್ದ ಶೇಷಾದ್ರಿಪುರಂ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ರು.

ಇನ್ನು ಚೇತನ್ ಪೋಸ್ಟ್ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 32ನೇ ಎಸಿಎಮ್ಎಮ್ ಕೋರ್ಟ್ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.. ಇದೇ ವೇಳೆ ಚೇತನ್ ಪರ ವಕೀಲರು ಬೇಲ್ ಅರ್ಜಿ ಹಾಕಿದ್ರು.. ಬೇಲ್ ಅರ್ಜಿ ವಿಚಾರಣೆ ನಡೆಸಿದ ಕೊರ್ಟ್ ವಿಚಾರಣೆಯನ್ನ 23ನೇ ತಾರೀಖಿಗೆ ಮುಂದೂಡಿದೆ.. ಬೇಲ್ ಸಿಕ್ಕೋವರ್ಗೂ ಚೇತನ್ ಗೆ ಸದ್ಯ ಜೈಲುವಾಸ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಸೇರ್ಪಡೆ ಆದ ದಲಿತಪರ ನಾಯಕರು