Publish Date: Tue, 21 Mar 2023 (19:00 IST)
Updated Date: Tue, 21 Mar 2023 (18:14 IST)
ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಹರನಾಳ ಗ್ರಾಮದಲ್ಲಿ ನಡೆದಿದೆ. ಅನುಸೂಯ ಬಾಯಿ ಹತ್ಯೆಯಾದ ಮಹಿಳೆ. ಈಕೆ ಜಮೀನಿನಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುವಾಗ ದುಷ್ಕರ್ಮಿಗಳು ಹತ್ಯೆ ಮಾಡಿರುವುದಾಗಿ ಮೇಲ್ನೋಟಕ್ಕೆ ಕಾಣ್ತಿದೆ. ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಮೈಮೇಲಿನ ಚಿನ್ನಾಭರಣ ದೋಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.. ಇದ್ರಿಂದಾಗಿ ಜಮೀನಿನಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಭಯ ಶುರುವಾಗಿದೆ. ಸ್ಥಳಕ್ಕೆ ಯಡ್ರಾಮಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಪತ್ನಿಯನ್ನೇ ಕತ್ತು ಕತ್ತರಿಸಿ ಪತಿ ಕೊಲೆ ಮಾಡಿದ ಘಟನೆ ನಡೆದಿದೆ.. ಚಾಮರಾಜನಗರ ಜಿಲ್ಲೆ ಕೊತ್ತಲವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ರತ್ನಮ್ಮ ಮೃತ ಮಹಿಳೆ. ಕೌಟುಂಬಿಕ ಗಲಾಟೆ ಹಿನ್ನೆಲೆಯಲ್ಲಿ ಪಾಪಿ ಪತಿ ಮಹೇಶ್ ಈ ಕೃತ್ಯ ಎಸಗಿದ್ದಾನೆ.. ಕೊಲೆಗಾರ ಪತಿ ಮಹೇಶ್ನನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.