Select Your Language

Notifications

webdunia
webdunia
webdunia
webdunia

ಹಾನಗಲ್​​ ‘ಕೈ’ ಟಿಕೆಟ್​ಗೆ ಮನೋಹರ್​ ಲಾಭಿ

ಹಾನಗಲ್​​ ‘ಕೈ’ ಟಿಕೆಟ್​ಗೆ ಮನೋಹರ್​ ಲಾಭಿ
ಹಾನಗಲ್​​ , ಮಂಗಳವಾರ, 21 ಮಾರ್ಚ್ 2023 (17:40 IST)
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಲಾಭಿ ಜೋರಾಗೇ ನಡೀತಿದೆ. ಮಾಜಿ ಸಚಿವ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಕಾಂಗ್ರೆಸ್​​ ಟಿಕೆಟ್ ಆಕಾಂಕ್ಷಿ ಮನೋಹರ್​​ ತಹಶೀಲ್ದಾರ್​​ ದೆಹಲಿ ನಾಯಕರನ್ನು ಭೇಟಿಯಾಗಿ ಟಿಕೆಟ್​ಗಾಗಿ ಲಾಭಿ ನಡೆಸಿದ್ದಾರೆ.. ಹಾನಗಲ್ ಕ್ಷೇತ್ರದ ‘ಕೈ’ ಟಿಕೆಟ್​ಗಾಗಿ ಮನೋಹರ್ ತಹಶೀಲ್ದಾರ್​​ ಕಸರತ್ತು ನಡೆಸಿದ್ದಾರೆ.. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿರುವ ಅವರು, ನನ್ನದು ಕೊನೆಯ ಚುನಾವಣೆ, ಈ ಬಾರಿ ನನಗೆ ಟಿಕೆಟ್ ಕೊಡಿ. ನನಗೆ ಕೊಡದಿದ್ದರು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಅವರು ಒತ್ತಾಯಿಸಿದ್ದಾರೆ. AICC ಪಟ್ಟಿಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಹೆಸರು ಔಟ್ ಆಗುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಡುರಸ್ತೆಯಲ್ಲಿ ಯುವಕನ ಮೇಲೆ ದಾಳಿ