Select Your Language

Notifications

webdunia
webdunia
webdunia
webdunia

ಮಾರ್ಕೆಟ್ ನಲ್ಲಿ ಖರೀದಿ ಜೋರಪ್ಪೋ ..ಜೋರು

ಮಾರ್ಕೆಟ್ ನಲ್ಲಿ ಖರೀದಿ  ಜೋರಪ್ಪೋ ..ಜೋರು
bangalore , ಮಂಗಳವಾರ, 21 ಮಾರ್ಚ್ 2023 (15:38 IST)
ನಾಳೆ ವರ್ಷದ ಮೊದಲ ಹಬ್ಬ ಚಂದ್ರಮಾನ ಯುಗಾದಿ ಬಂದೇಬಿಡ್ತು ,ಆದ್ರೆ ಜನ ಬೆಲೆ ಏರಿಕೆ ನಡುವೆಯೂ ಹೂ ಹಣ್ಣು ಖರೀದಿಗೆ ಮುಗಿಬೀಳ್ತಿದ್ದಾರೆ .ಕೋವಿಡ್ ನಿಂದಾಗಿ ಕಳೆಗುಂದಿದ್ದ ಹಬ್ಬಕ್ಕೇ ಈ ಬಾರಿ ಮೆರುಗು ಬಂದಿದೆ. ವಿಶ್ವಕ್ಕೆ ಜನವರಿ 1 ಹೊಸ ವರ್ಷ ವಾದರೇ ಹಿಂದೂಗಳಿಗೆ ಯುಗಾದಿ  ಮೊದಲ ಹಬ್ಬ. ಕಳೆದ 3 ವರ್ಷದಿಂದ ಕೊರೋನಾ ಮಹಾಮಾರಿಯಿಂದ ಯುಗಾದಿ ಹಬ್ಬದ ಮೇಲೆ ಕರಿನೆರಳು ಬಿದ್ದಿತ್ತು. ಹೀಗಾಗಿ  ಯುಗಾದಿ ಹಬ್ಬವನ್ನು ಅಷ್ಟೇನೂ ಸಂಭ್ರಮದಿಂದ ಆಚರಣೆ ಮಾಡಿರಲಿಲ್ಲ. 

ವಸಂತ ಮಾಸದಲ್ಲಿ ಬರುವ ಈ ಹಬ್ಬ  ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದೆ. ಒಂದೆಡೆ ಚಿಗುರಿದ ಮಾವು,ಬೇವು  ಮತ್ತೊಂದೆಡೆ ಕಂಪು ಬೀರುವ ಮಲ್ಲಿಗೆ. ಹೀಗೆ ಇಡೀ ಮಾರ್ಕೇಟಿನಲ್ಲಿ ಹಬ್ಬದ ವಾತವರಣವೇ ಮೂಡಿತ್ತು. ಅಗತ್ಯ ವಸ್ತುಗಳ ಬೆಲೆ ಕೊಂಚ ಏರಿಕೆಯಾಗಿದ್ದರೂ, ಗ್ರಾಹಕರು ಮಾತ್ರ ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ದರು.

ಎಷ್ಟಿದೆ ಹಣ್ಣುಗಳ ಬೆಲೆ ಅನ್ನೊದನ್ನ ನೋಡೋದಾದ್ರೆ..
 
ಕಳೆದ ವಾರ 1ಕೆಜಿ ಸೇಬು  120ರೂ ಇದ್ರೆ ಈಗ ಕೆಜಿಗೆ 200ರೂ 
 
ಕಳೆದ ವಾರ ಒಂದು ಕೆಜಿ ದ್ರಾಕ್ಷಿ  60ರೂ ಇದ್ರೆ ಈಗ ಕೆಜಿಗೆ 70 ರೂ
 
ಕಳೆದ ವಾರ ಒಂದು ಕೆಜಿ ಬಾಳೆಹಣ್ಣು  50ರೂ ಇದ್ರೆ ಈಗ ಕೆಜಿಗೆ  70ರೂ

ಹೂಗಳ  ಬೆಲೆ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ 
 
ಕಳೆದ ವಾರದ ಮಲ್ಲಿಗೆ-  220ರೂ ಇದ್ರೆ ಈಗ ಕೆಜಿಗೆ    400ರೂ 
 
ಕಳೆದ ವಾರ ಕನಕಾಂಬರ ಕೆಜಿ ಗೆ ಇದ್ರೆ 400 ರೂ ಇದ್ರೆ ಈಗ ಕೆಜಿಗೆ 800 ರೂ 
 
ಕಳೆದ ವಾರ ಗುಲಾಬಿ ಕೆಜಿಗೆ 60 ರೂ ಇದ್ರೆ ಈಗ ಕೆಜಿಗೆ 200 ರೂ 

ಕೊವಿಡ್ ನಂತರ ಯುಗಾದಿ ಹಬ್ಬಕ್ಕೆ ಹೊಸ ಕಳೆ ಬಂದಿದ್ದು, ವರ್ಷದ ಮೊದಲ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯದ ಜನರು ಭರ್ಜರಿಯಾಗೇ ತಯಾರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಲ್ಡೇಜ್ ಪೆನ್ಶನ್ ಸ್ಕೀಮ್ ನಲ್ಲೂ ವಂಚನೆ..!