Select Your Language

Notifications

webdunia
webdunia
webdunia
webdunia

ಅದಾನಿ ಕೈ ಹಿಡಿದ ರಾಜೀವ್ ಜೈನ್ ಯಾರು?

ಅದಾನಿ ಕೈ ಹಿಡಿದ ರಾಜೀವ್ ಜೈನ್ ಯಾರು?
ಅಹಮದಾಬಾದ್ , ಶುಕ್ರವಾರ, 3 ಮಾರ್ಚ್ 2023 (08:35 IST)
ಅಹಮದಾಬಾದ್ : ಉಕಿಉ ವಿಶ್ವದ ಪ್ರಮುಖ ಜಾಗತಿಕ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಹೂಡಿಕೆದಾರರಲ್ಲಿ ಒಂದಾಗಿದೆ. 2023ರ ಜನವರಿ 31ರಂದು ಉಕಿಉ ನೀಡಿದ ಮಾಹಿತಿ ಪ್ರಕಾರ 92 ಶತಕೋಟಿ ಡಾಲರ್ ಮೌಲ್ಯದ ಸ್ವತ್ತುಗಳನ್ನು ನಿರ್ವಹಿಸುತ್ತಿದೆ.
 
ಆಸ್ಟ್ರೇಲಿಯದ ಸ್ಟಾಕ್ ಎಕ್ಸ್ಚೇಂಜ್ ಲಿಸ್ಟೆಡ್ ಕಂಪನಿಯಾಗಿದ್ದು, ಆಸ್ಟ್ರೇಲಿಯಾದ 2022 ಜಾಗತಿಕ ಇಕ್ವಿಟಿ ಮ್ಯಾನೇಜರ್ ಪ್ರಶಸ್ತಿಯನ್ನು ಪಡೆದಿದೆ.  ಉಕಿಉ ಅಲ್ಲದೇ ಗೋಲ್ಡ್ಮನ್ ಸ್ಯಾಕ್ಸ್ ಟ್ರಸ್ಟ್ ಅದಾನಿ ಗ್ರೀನ್ ಎನರ್ಜಿ ಕಂಪನಿ 2.5 ಕೋಟಿ ಷೇರುಗಳನ್ನು ಗುರುವಾರ  ಖರೀದಿಸಿದೆ. ಎಸ್.ಬಿ. ಅದಾನಿ ಫ್ಯಾಮಿಲಿ ಟ್ರಸ್ಟ್ ಪ್ರತಿ ಷೇರನ್ನು 504.60 ರೂ.ಗೆ ಮಾರಾಟ ಮಾಡಿದೆ.

ಯಾರು ರಾಜೀವ್ ಜೈನ್ ?
ಭಾರತದಲ್ಲಿ ಹುಟ್ಟಿ ಬೆಳೆದ ಜೈನ್ 1990ರಲ್ಲಿ ಮಿಯಾಮಿ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಪಡೆಯಲು ಅಮೆರಿಕಗೆ ತೆರಳಿದರು. 

1994ರಲ್ಲಿ ಸ್ವಿಜರ್ಲ್ಯಾಂಡ್ ಮೂಲದ ವೊಂಟೊಬೆಲ್ಗೆ ಸೇರಿದ ರಾಜೀವ್ ಜೈನ್ ಸಂಸ್ಥೆಯಲ್ಲಿ ವಿವಿಧ ಹುದ್ದೆ ಏರಿ 2002ರಲ್ಲಿ ಸಿಐಒ ಆಗಿ ನೇಮಕವಾಗಿದ್ದರು. ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಹೂಡಿಕೆ ಅಧಿಕಾರಿ ಮತ್ತು ಇಕ್ವಿಟಿಗಳ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

23 ವರ್ಷಗಳ ಹೂಡಿಕೆಯ ಅನುಭವವನ್ನು ಹೊಂದಿರುವ ಇವರು 2016ರಲ್ಲಿ ತನ್ನದೇ ಆದ ಉಕಿಉ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತ ಐಟಿಸಿ, ಎಚ್ಡಿಎಫ್ಸಿ, ಆರ್ಐಎಲ್, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳಲ್ಲೂ ಇವರು ಹೂಡಿಕೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಪ್ರಯಾಣಿಕರಿಗೆ ಗುಡ್‍ನ್ಯೂಸ್?