Publish Date: Thu, 09 Feb 2023 (08:01 IST)
Updated Date: Thu, 09 Feb 2023 (10:24 IST)
ನವದೆಹಲಿ : ದೇಶಾದ್ಯಂತ ಒಂದೇ ಒಂದು ಹೆಸರು ಕೇಳಿಬರುತ್ತಿದೆ. ಅದು ಅದಾನಿ.. ಅದಾನಿ.. ಅದಾನಿ. ತಮಿಳುನಾಡು, ಕೇರಳದಿಂದ ಹಿಮಾಚಲ ಪ್ರದೇಶದವರೆಗೂ ಅದಾನಿ ಹೆಸರು ಕೇಳಿಬರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಹೇಳಿದ್ದಾರೆ.
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ಉದ್ಯಮಿ ಗೌತಮ್ ಅದಾನಿ ಲಾಭ ಪಡೆಯಲು ಮೋದಿ ಸರ್ಕಾರ ವ್ಯಾಪಾರ ನಿಯಮಗಳನ್ನ ಬದಲಾಯಿಸುತ್ತಿದೆ. ಅದಾನಿಗೆ ಅನುಕೂಲವಾಗುವಂತೆ ನಿಯಮಗಳನ್ನ ರೂಪಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಮಾನ ನಿಲ್ದಾಣಗಳ ಬಗ್ಗೆ ಪೂರ್ವಾನುಭವ ಹೊಂದಿರದ ಯಾವುದೇ ವ್ಯಕ್ತಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಆದರೆ ಬಿಜೆಪಿ ನೇತೃತ್ವದ ಭಾರತ ಸರ್ಕಾರ ಈ ನಿಯಮ ಬದಲಾಯಿಸಿ ಅದಾನಿ ಒಡೆತನಕ್ಕೆ 6 ವಿಮಾನ ನಿಲ್ದಾಣಗಳನ್ನ ನೀಡಿದೆ.