Select Your Language

Notifications

webdunia
webdunia
webdunia
webdunia

ಕುಮಟಳ್ಳಿಗೆ ಟಿಕೆಟ್​ ಸಿಗದಿದ್ರೆ ರಾಜಕೀಯ ನಿವೃತ್ತಿ

If he does not get ticket for Kumatalli
ಅಥಣಿ , ಮಂಗಳವಾರ, 21 ಮಾರ್ಚ್ 2023 (18:04 IST)
ಬಿಜೆಪಿ ಅಥಣಿ ಟಿಕೆಟ್​ ಗೊಂದಲ ಮುಂದುವರಿದಿದೆ. ಒಂದ್ಕಡೆ ತನ್ನ ಆಪ್ತ ಮಹೇಶ್​ ಕುಮಟಳ್ಳಿಗೆ ಟಿಕೆಟ್​ ಕೊಡಿಸಲು ರಮೇಶ್​ ಜಾರಕಿಹೊಳಿ ಕಸರತ್ತು ನಡೆಸ್ತಿದ್ರೆ.. ಮತ್ತೊಂದೆಡೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಅಥಣಿ ಟಿಕೆಟ್​ಗಾಗಿ ಭಾರೀ ಲಾಭಿ ನಡೆಸ್ತಿದ್ದಾರೆ. ಅಥಣಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್​ ಜಾರಕಿಹೊಳಿ, ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ.. ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ.. ಸವದಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರೆ ಅವರು ಯೋಚನೆ ಮಾಡಬೇಕು. ಪಕ್ಷದ ವರಿಷ್ಠರು ಮತ್ತು ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾರೆ ಅಂದ್ರ. ಇನ್ನು, RSS ಉತ್ತರ ಪ್ರಾಂತ್ಯ ಮುಖಂಡ ಅರವಿಂದ ದೇಶಪಾಂಡೆ ನಿವಾಸಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾತನಾಡಿದ ರಮೇಶ್​ ಜಾರಕಿಹೊಳಿ, ದೇಶಪಾಂಡೆ ಅವರದ್ದು, ನಮ್ಮದು ಹಳೆಯ ಸಂಬಂಧ. ಇದೊಂದು ಸೌಜನ್ಯದ ಭೇಟಿಯಾಗಿದೆ ಅಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯನ ಕಂಡ್ರೆ ಮರುಕ ಆಗ್ತಾ ಇದೆ : ಆರ್ ಅಶೋಕ್..