Select Your Language

Notifications

webdunia
webdunia
webdunia
webdunia

ಯುಗಾದಿಯನ್ನ ಹಬ್ಬವನ್ನು ಖುಷಿಯಿಂದ ಬರಮಾಡಿಕೊಂಡ ಸಿಲಿಕಾನ್ ಜನ…!

ಯುಗಾದಿಯನ್ನ ಹಬ್ಬವನ್ನು ಖುಷಿಯಿಂದ ಬರಮಾಡಿಕೊಂಡ ಸಿಲಿಕಾನ್ ಜನ…!
bangalore , ಬುಧವಾರ, 22 ಮಾರ್ಚ್ 2023 (16:06 IST)
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಈ ಸಾಲುಗಳೆ ಹೇಳುವ ರೀತಿ ನಮ್ಮ ಐಟಿ ಸಿಟಿ ಜನರು ಯುಗಾದಿ ಹಬ್ಬವನ್ನು ಭರ್ಜರಿಯಾಗಿ ಬರ ಮಾಡಿಕೊಂಡರು. ಇನ್ನು ದೇವಸ್ಥಾನಗಳಲ್ಲಿ ಯಾವ ರೀತಿಯಲ್ಲಿ ಹೊಸ ವರ್ಷದ ಹಬ್ಬನ ಬರ ಮಾಡಿಕೊಂಡರು.ವರ್ಷದ ಮೊದಲ ಹಬ್ಬ ಯುಗಾದಿಯನ್ನ ಸಿಲಿಕಾನ್ ಜನರು ಖುಷಿಯಿಂದ ಬರ ಮಾಡಿಕೊಂಡ್ರು. ಇನ್ನು ದೇವಸ್ಥಾನಗಳಲ್ಲಿ  ಧಾರ್ಮಿಕ ಹಬ್ಬವನ್ನಾಗಿ ಆಚಾರಿಸಲು, ಮುಜುರಾಯಿ ಇಲಾಖೆ ಸುತ್ತೋಲೆ ನೀಡಿದ್ದರಿಂದ ಇಂದು ವಿಜೃಂಭಣೆಯಿಂದ ಹಬ್ಬವನ್ನ ಆಚಾರಿಸಿದ್ರು.

ಬೆಳ್ಳಗ್ಗೆ 6 ಗಂಟೆಯಿಂದ ನಗರದ ಕಾಡು ಮಲ್ಲೇಶ್ವರಂ, ಗವಿಗಂಗಾಧರೇಶ್ವರ, ಗಂಗಮ್ಮ ದೇವಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ - ಪೂಜೆ ಅರ್ಜನೆ ಮಾಡಿ, 9 ಗಂಟೆಗೆ ಪಂಚಾಭಿಷೇಕ ಮಹಾಮಂಗಾಳಾರತಿ ಮಾಡಿ ದೇವರ ದರ್ಶನಕ್ಕೆ ಅವಾಕಾಶ ಕಲ್ಪಿಸಲಾಗಿತ್ತು. ಇನ್ನು ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಬೇವು - ಬೆಲ್ಲ ನೀಡಿ ಪ್ರಸಾಧ ವಿತರಣೆಯನ್ನ ಮಾಡಲಾಯಿತು. ಇನ್ನು ದೇವರ ದರ್ಶನಕ್ಕೆ ರಾತ್ರಿ 9 ಗಂಟೆಯವರೆಗೂ ಅವಾಕಾಶ ಕಲ್ಪಿಸಲಾಗಿತ್ತು ಇನ್ನೂ ಗಂಗಮ್ಮ ದೇವಿ ದೇವಾಲಾಯದಲ್ಲಿ ದೇವಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆರಾಧ್ಯ ದೈವ ಪಂಜುರ್ಲಿ ಯ ಅಲಂಕಾರ ಮಾಡಲಾಗಿತ್ತು ಇದು ಭಕ್ತರ ಮೈ ಮನ ವನ್ನು ರೋಮಾಂಚನಗೊಳಿಸಿತು. 

ದೇವಾಲಯಗಳ ಮುಂಭಾಗವನ್ನು ತೆಂಗಿನ ಗರಿಗಳಿಂದ ಚಪ್ಪರ, ತಳಿರು ತೋರಣ, ಹೂವಿನ ಅಲಂಕಾರ ಮುಂತಾದವುಗಳಿಂದ ಅಲಂಕರಿಸಲಾಗಿದ್ದು, ಯುಗಾದಿ ಹಬ್ಬದ  ದಿನ ಇಂದು ಬೆಳಿಗ್ಗೆ ದೇವರಿಗೆ ವಿಶೇಷವಾಗಿ ಸಂಕಲ್ಪಿಸಿ, ಪ್ರಾರ್ಥಿಸಿ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ  ವಿಜೃಭಂನೆಯಿಂದ ಆಚರಿಸಲಾಯಿತು, ಇನ್ನು ಭಕ್ತರು ಕೂಡ ಹೊಸ ವರುಷದಂದು ದೇವಾಲಯಕ್ಕೆ ಬಂದು ತಮ್ಮ ಕಷ್ಟ ಕಾರ್ಪಣ್ಯವನ್ನು ದೂರ ಮಾಡಿಕೊಳ್ಳುವಂತೆ ಬೇಡಿಕೊಂಡರು,

Share this Story:

Follow Webdunia kannada

ಮುಂದಿನ ಸುದ್ದಿ

ಪೆಪ್ಪರ್ ಸ್ಪ್ರೇ ಮಾಡಿ 27 ಸಾವಿರ ದೋಚಿದ ರೌಡಿಶೀಟರ್ ಗಳು..!