Select Your Language

Notifications

webdunia
webdunia
webdunia
Tuesday, 15 April 2025
webdunia

ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನ

He tried to commit suicide by poisoning his wife and children
bangalore , ಗುರುವಾರ, 2 ಮಾರ್ಚ್ 2023 (18:18 IST)
ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಕೋಣನಕುಂಟೆಯಲ್ಲಿ ವಾಸವಾಗಿದ್ದ ನಾಗೇಂದ್ರ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಂಡ್ತಿ ವಿಜಯಲಕ್ಷ್ಮಿ (28) ಮಕ್ಕಳಾದ ನಿಷಾ (7) ಹಾಗೂ ದೀಕ್ಷಾ (5) ಸಾವನ್ನಪ್ಪಿದ ದುದೈರ್ವಿಗಳು. ಊಟದಲ್ಲಿ ತಿಗಣೆ ಹಾಗೂ ಇಲಿ ಔಷಧ ಬೆರೆಸಿ  ಹೆಂಡ್ತಿ-ಮಕ್ಕಳಿಗೆ ಸೇವಿಸುವಂತೆ ಮಾಡಿದ್ದ ಬಳಿದ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.‌ ಅಷ್ಟೊತ್ತಿಗಾಗಲೇ ಹೆಂಡ್ತಿ ಸಹೋದರ ಬಂದು ರಕ್ಷಿಸಿದ್ದಾರೆ.

 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಮಾನಸಿಕ‌ ಖಿನ್ನತೆಗೆ ಒಳಗಾಗಿದ್ದ‌. ಹೀಗಾಗಿ ಸಂಸಾರದ ನೌಕೆ ಮುನ್ನೆಡಸಲು ಕಷ್ಟವಾಗಿತ್ತು‌. ಹೆಂಡ್ತಿ ಕೆಲಸಕ್ಕೆ ಹೋಗಿ ಕುಟುಂಬದ ನಿರ್ವಹಣೆ ನಡೆಸುತ್ತಿದ್ದಳು. ಈ ಮಧ್ಯೆ ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದೆ. ಇದರಿಂದ ಮನನೊಂದಿದ್ದ ನಾಗೇಂದ್ರ, ಹೆಂಡ್ತಿ ಮಕ್ಕಳಿಗೆ ವಿಷದ ಊಟ ತಿನ್ನಿಸಿ ಸಾವಿಗೆ  ಕಾರಣನಾಗಿದ್ದಾನೆ. ಕೃತ್ಯವೆಸಗಿದ ಬಳಿಕ ಡೋರ್ ಲಾಕ್ ಮಾಡಿಕೊಂಡು ಚಾಕುವಿನಿಂದ ಕೈ‌ಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಅಷ್ಟೊತ್ತಿಗಾಗಲೇ ಹೆಂಡತಿ ಸಹೋದರ ಬಂದು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಡ್ಡರಪಾಳ್ಯದಲ್ಲಿ ನಿವಾಸಿಯಾಗಿದ್ದ ನಾಗೇಂದ್ರ-ವಿಜಯಾ ದಂಪತಿಗೆ 2014 ರಲ್ಲಿ ಮದುವೆಯಾಗಿತ್ತು. ಇಬ್ಬರಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಾಗಿತ್ತು‌‌‌. ಹಲವು ವರ್ಷಗಳ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನಾಗೇಂದ್ರ ಕುಡಿತದ ದಾಸನಾಗಿದ್ದ. ಗಾಂಜ ವ್ಯಸನಿಯಾಗಿದ್ದನಂತೆ‌.‌ ಕುಟುಂಬ ಹೊಣೆಯನ್ನು ಹೊತ್ತಿಕೊಂಡಿದ್ದ ವಿಜಯ್ ಕೆಲಸಕ್ಕೆ ಹೋಗಿ ಗಂಡ-ಮಕ್ಕಳನ್ನ ಸಾಕುತ್ತಿದ್ದಳು. ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ನಿನ್ನೆ ಸಹ  ದಂಪತಿ ಜಗಳವಾಡಿಕೊಂಡಿದ್ದರು.‌ಈ ಮಧ್ಯೆ ಊಟದಲ್ಲಿ ತಿಗಣೆ ಹಾಗೂ ಇಲಿ ಔಷಧಿ ಬೆರೆಸಿ ಹೆಂಡ್ತಿ‌ ಮಕ್ಕಳಿಗೆ ಸೇವಿಸುವಂತೆ ಮಾಡಿದ್ದಾನೆ.‌ ಊಟದ ನಂತರ ತೀವ್ರ ಅಸ್ವಸ್ಥದಿಂದ ಬಳಲಿ‌ ಮೂವರು ಸಾವನ್ನಪ್ಪಿದ್ದಾರೆ‌‌‌. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರದ ಬಕಾಸೂರ್ ಆಗಿದೆ ಬಿಜೆಪಿ ಸರ್ಕಾರ-ಪ್ರೀಯಾಂಕ ಖರ್ಗೆ