ಕಳ್ಳತನಕ್ಕೆ ಬಂದ ಕಳ್ಳ ಮನೆಯಲ್ಲೇ ಕೃತ್ಯ ನಡೆಸಲು ತಯಾರಿ ಮಾಡಿಕೊಂಡಿದ್ದ.ಅದ್ರೆ ಕೈಚಳಕ ತೋರಿಸೋ ವೇಳೆಗೆ ಲಕ್ ಕೈಕೊಟ್ಟಿದೆ.ಕಳ್ಳತನ ವೇಳೆ ಸೈರನ್ ದಿಢೀರ್ ಮೊಳಗಿದೆ.ಸೈರನ್ ಶಬ್ದ ಕೇಳಿ ಮನೆಯಿಂದ ಅಸಾಮಿ ಕಾಲಕಿತ್ತ.ಬೆಂಗಳೂರು ಹೊರವಲಯದಲ್ಲಿ ಘಟನೆ ನಡೆದಿದ್ದು,ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯಾವಳಿ ಮೂಲಕ ಐನಾತಿ ಕಳ್ಳನಿಗೆ ಪೊಲೀಸರು ಬಲೆ ಬೀಸಿದಾರೆ.ನವೆಂಬರ್ 17 ರಂದು ಕಳ್ಳತನ ಯತ್ನ ನಡೆದಿದೆ.ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮನೆಯೊಂದಕ್ಕೆ ಅಸಾಮಿ ನುಗ್ಗಿದ .ಕಿಟಕಿ ಮೂಲಕ ಮನೆಯೊಳಗೆ ಕಳ್ಳ ಎಂಟ್ರಿಕೊಟ್ಟಿದ.ಸಿಸಿಟಿವಿ ಮುಂಭಾಗದಲ್ಲೆ ನಿಂತು ಮುಖ ಕಾಣದಂತೆ ನೀಟಾಗಿ ಅಸಾಮಿ ಮಂಕಿ ಕ್ಯಾಪ್ ಧರಿಸಿದ.ಹಾಗೆಯೇ ಕೈಯಲ್ಲಿ ಸುತ್ತಿಗೆ ಹಾಗೂ ಕಬ್ಬಿಣದ ರಾಡ್ ಹಿಡಿದು ಲಾಕರ್ ಒಡೆಯಲು ಮುಂದಾಗಿದ್ದ.ಇನ್ನೇನು ಲಾಕರ್ ತೆಗೆಯಬೇಕು ಅನ್ನೋಷ್ಟರಲ್ಲಿ ಸೈರನ್ ಮೊಳಗಿದೆ.
ಲಾಕರ್ ಗೆ ಅಳವಡಿಸಿದ್ದ ಸೈರನ್ ನಿಂದ ಜೋರು ಶಬ್ದ ಬಂದಿದೆ.ಸೈರನ್ ಮೊಳಗುತ್ತಿದ್ದಂತೆ ಮನೆಯಿಂದ ಕಳ್ಳ ಕಾಲ್ಕಿತ್ತ .ಕಳ್ಳನ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿ ಕಳ್ಳನಿಗಾಗಿ ಶೋಧಕಾರ್ಯ ನಡೆಸಲಾಗಿದೆ.ಈಶಾನ್ಯ ವಿಭಾಗ, ಪೂರ್ವ ವಿಭಾಗ ಹಾಗೂ ವೈಟ್ ಫೀಲ್ಡ್ ಏರಿಯಾಗಳಲ್ಲಿ ಶೋಧಕಾರ್ಯ ನಡೆಯುತ್ತಿದ್ದು,ಸದ್ಯ ಇನ್ನೂ ಈ ಐನಾತಿ ಕಳ್ಳನ ಸುಳಿವು ಸಿಗಲಿಲ್ಲ.
ಮೂರು ವಿಭಾಗದ ಪೊಲೀಸರಿಂದ ತೀವ್ರಹುಡುಕಾಟು ನಡೆದಿದೆ.