Select Your Language

Notifications

webdunia
webdunia
webdunia
webdunia

ನರಹಂತಕ ಹೇಳಿಕೆ; ಬಿಜೆಪಿ ಪ್ರೊಟೆಸ್ಟ್

homicidal statement
bangalore , ಬುಧವಾರ, 21 ಡಿಸೆಂಬರ್ 2022 (20:02 IST)
ಪ್ರಧಾನಿ ನರೇಂದ್ರ ಮೋದಿ ಅವರನ್ನು ನರಹಂತಕ ಎಂದು ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷದ ಬಿಟಿಎಂ ಶಾಸಕರಾದ ರಾಮಲಿಂಗಾ ರೆಡ್ಡಿ ಅವರ ಹಿಂಬಾಲಕರ ವಿರುದ್ಧ SG ಪಾಳ್ಯ ಠಾಣೆಯಲ್ಲಿ FIR ದಾಖಲು ಮಾಡಿದ್ದರು. ಆದ್ರೆ FIR ದಾಖಲಾದ್ರು ಸಹ ಇನ್ನೂ ಬಂಧನವಾಗಿಲ್ಲ ಎಂದು ಬಿಜೆಪಿ ಬಿಟಿಎಂ ಮಂಡಲದ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಕೊಡಲೇ ಅವ್ರನ್ನ ಬಂಧಿಸಿಸುವಂತೆ ಆಗ್ರಹಿಸಿದರು. ಇತ್ತ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರೂ ಸಹ ಪ್ರತಿಭಟನೆ ನಡೆಸಿದರು. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ರಾಮಲಿಂಗಾರೆಡ್ಡಿ ಆಪ್ತರನ್ನ ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು