Select Your Language

Notifications

webdunia
webdunia
webdunia
webdunia

ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು
belagavi , ಬುಧವಾರ, 21 ಡಿಸೆಂಬರ್ 2022 (19:58 IST)
ದೇಶಕ್ಕಾಗಿ ಬಿಜೆಪಿ ಮನೆಯ ನಾಯಿಯೂ ಸತ್ತಿಲ್ಲ ಎಂದಿದ್ದ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಈಗಿರೋದು ಇಟಲಿ ಕಾಂಗ್ರೆಸ್. ಇಟಲಿ ಕಾಂಗ್ರೆಸ್ ನಾಯಿಗಳೂ ಭಾರತದ ಪರವಾಗಿ ಬೊಗಳುವುದಿಲ್ಲ ಅಂತಾ ಪರೋಕ್ಷವಾಗಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ನಾಯಿ ಎಂದು ಸಿ.ಟ.ರವಿ ಸಂಬೋಧಿಸಿದ್ದಾರೆ. ಬೆಳಗಾವಿಯ ಖಾಸಗಿ ಹೊಟೇಲ್‌ನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ಬದಲಾವಣೆ ಆಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್ ಬೇರೆ, ಈಗಿರುವ ಕಾಂಗ್ರೆಸ್ ಬೇರೆ. ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದು ಹೇಳುತ್ತದೆ. ಸ್ವಾತಂತ್ರ್ಯ ಕೊಡುಗೆ ಕೊಟ್ಟಿರೋದು ಭಾರತ ಲೂಟಿ ಮಾಡೋದಕ್ಕಾ.? ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿದಂತೆ ಕಾಂಗ್ರೆಸ್ ನಾಯಕರು ನಾಲ್ಕೈದು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಖರ್ಗೆಯವರೇ ಎಚ್ಚರವಾಗಿರಿ, ಪಾಕಿಸ್ತಾನ ಪರವಾಗಿ ಬೊಗಳುವ ನಾಯಿಯನ್ನು ಸಾಕಿದ್ದೀರಿ. ಕಾಂಗ್ರೆಸ್ ನಾಯಿ ಸರ್ಜಿಕಲ್ ಸ್ಟ್ರೈಕ್ ಆದ್ರೆ ಭಾರತದ ವಿರುದ್ಧವಾಗಿ ಬೊಗಳುತ್ತೆ. ಆ ನಾಯಿ ಭಾರತದ ಪರವಾಗಿ ಬೊಗಳಲ್ಲ’ ಅಂತಾ ಕಾಂಗ್ರೆಸ್​​​​​​​ ವಿರುದ್ದ ಸಿ.ಟಿ.ರವಿ ಕಿಡಿಕಾರಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಚಿತ್ರವಾಗಿ ಆತ್ಮಹತ್ಯೆ ಮಾಡ್ಕೊಂಡ ಟೆಕ್ಕಿ