Publish Date: Wed, 21 Dec 2022 (19:34 IST)
Updated Date: Wed, 21 Dec 2022 (19:51 IST)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನೆಡೆಸಿದ್ದಾರೆ. ವೈಟ್ ಫೀಲ್ಡ್ , ಕಾಡುಗೋಡಿ, ಮಹದೇವಪುರ ಹಾಗು ಮಾರತ್ ಹಳ್ಳಿ, ಹೆಚ್ ಎ ಎಲ್, ಬೆಳ್ಳಂದೂರು, ವರ್ತೂರು, ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ. ಒಟ್ಟು 10 ಕೋಟಿ 36 ಲಕ್ಷದ 49 ಸಾವಿರ ಮೌಲ್ಯದ ಕಳವು ಮಾಲುಗಳನ್ನ ವಶಕ್ಕೆ ಪಡೆದಿದ್ದರೆ. ಒಂದು ಕೋಟಿ 88 ಲಕ್ಷ ಮೌಲ್ಯದ ಮೂರುವರೆ ಕೆಜಿ ಚಿನ್ನಾಭರಣ, ನಾಲ್ಕೂವರೆ ಕೆಜಿ ಬೆಳ್ಳಿ. 24 ಲಕ್ಷ ಬೆಲೆಬಾಳುವ ಡೈಮೆಂಡ್ ಆಭರಣ, 1 ಕೋಟಿ 41 ಲಕ್ಷದ ಬೆಲೆ ಬಾಳುವ 700 ವಿವಿಧ ಕಂಪನಿಯ ಮೊಬೈಲ್. 62 ಲಕ್ಷ ಬೆಲೆ ಬಾಳುವ 96 ಲ್ಯಾಪ್ ಟ್ಯಾಪ್, 2 ಕೋಟಿ 37 ಲಕ್ಷ ಬೆಲೆಬಾಳುವ 313 ದ್ವಿಚಕ್ರವಾಹನ, 94 ಲಕ್ಷ ಬೆಲೆ ಬಾಳುವ 15 ಕಾರು ಹಾಗು ಒಂದು ಜೆಸಿಬಿ ವಶಕ್ಕೆ ಪಡೆದಿದ್ದಾರೆ. 1 ಕೋಟಿ 91 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. 41 ಮಾದಕ ವಸ್ತುಗಳ ಮಾರಾಟ ಪ್ರಕರಣ ಪತ್ತೆಯಾಗಿದ್ದು 93 ಲಕ್ಷ ಮೌಲ್ಯದ 159 ಕೆಜಿ ಮಾದಕ ವಸ್ತುವನ್ನ ವಶಕ್ಕೆ ಪಡೆದಿದ್ದಾರೆ.