Select Your Language

Notifications

webdunia
webdunia
webdunia
Saturday, 5 April 2025
webdunia

ನಡುರಸ್ತೆಯಲ್ಲಿಯೇ ವಿದ್ಯಾರ್ಥಿಗಳ ಗೂಂಡಾಗಿರಿ

Be a student hooligan in the middle of nowhere
ಯಲಹಂಕ , ಬುಧವಾರ, 21 ಡಿಸೆಂಬರ್ 2022 (19:18 IST)
ಕ್ಷುಲ್ಲಕ ಕಾರಣಕ್ಕೆ ದೊಣ್ಣೆ, ವಿಕೆಟ್ ಹಿಡಿದು ಕಾಲೇಜು ವಿದ್ಯಾರ್ಥಿಗಳು ನಡುರಸ್ತೆಯಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಕಾಲೇಜು‌ ಬಳಿ ಘಟನೆ ನಡೆದಿದ್ದು, ಕೈನಲ್ಲಿ ವಿಕೆಟ್ ಮತ್ತು ದೊಣ್ಣೆಗಳಿಡಿದು‌ ಓಡಾಡುವ ದೃಶ್ಯ ‌ಮೊಬೈಲ್​ನಲ್ಲಿ ಸೆರೆಯಾಗಿದೆ. ಪ್ರತಿನಿತ್ಯ ಕಾಲೇಜು ಬಳಿ ಪುಂಡ‌ ಯುವಕರಿಂದ ದಾಂಧಲೆ ಹೆಚ್ಚಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳ ದಾಂಧಲೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಬಿಚ್ಚಿಬಿದ್ದಿದ್ದಾರೆ. ಯುವಕರು ಗೂಂಡಾಗಿರಿ ಮಾಡ್ತಿದ್ರು ರಾಜಾನುಕುಂಟೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ. ಕಾಲೇಜು ಬಳಿ ಪ್ರತಿನಿತ್ಯ ಗಲಾಟೆಗಳಾದ್ರು ಎಚ್ಚೆತ್ತುಕೊಳ್ತಿಲ್ಲ ಎಂದು ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಯಲಹಂಕ ತಾಲೂಕಿನ ದಿಬ್ಬೂರು ಬಳಿಯ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕಾಲೇಜಿನ ಹುಡುಗರು, ಕ್ಷುಲ್ಲಕ ವಿಚಾರಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಹೊಡೆದಾಟದಲ್ಲಿ ಒಂದು ಕಾರು ಜಖಂ ಆಗಿದ್ದು, ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರಬಾಬು ನಾಯ್ಡು ವಿರುದ್ಧ ಸ್ಪರ್ಧಿಸಲ್ಲ-ನಟ ವಿಶಾಲ್